alex Certify ಈ ಗ್ರಾಮದಲ್ಲಿ ಹುಡುಗಿಯರು ಜೀನ್ಸ್ – ಹುಡುಗರು ಶಾರ್ಟ್ಸ್ ಧರಿಸುವಂತಿಲ್ಲ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಗ್ರಾಮದಲ್ಲಿ ಹುಡುಗಿಯರು ಜೀನ್ಸ್ – ಹುಡುಗರು ಶಾರ್ಟ್ಸ್ ಧರಿಸುವಂತಿಲ್ಲ…!

ಉತ್ತರ ಭಾರತದಲ್ಲಿ ಖಾಪ್ ಪಂಚಾಯಿತಿಗಳು ನ್ಯಾಯಾಲಯದಂತೆ ಕಾರ್ಯ ನಿರ್ವಹಿಸುತ್ತವೆ. ಕೆಲವೊಮ್ಮೆ ಈ ಪಂಚಾಯಿತಿಗಳು ನೀಡುವ ತೀರ್ಪುಗಳು ವಿವಾದಾತ್ಮಕವಾಗಿದ್ದು, ಇದೀಗ ಉತ್ತರಪ್ರದೇಶದ ಮುಜಾಫರ್ ನಗರ ಜಿಲ್ಲೆಯ ಪಿಪಲ್ಶಾ ಗ್ರಾಮದ ಪಂಚಾಯಿತಿ ಇಂತಹದೊಂದು ತೀರ್ಮಾನ ಕೈಗೊಳ್ಳುವ ಮೂಲಕ ಪರ – ವಿರೋಧ ಅಭಿಪ್ರಾಯ ವ್ಯಕ್ತವಾಗಲು ಕಾರಣವಾಗಿದೆ.

ಚರ್ತಾವಾಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇರುವ ಈ ಗ್ರಾಮದ ಪಂಚಾಯಿತಿ ಹುಡುಗಿಯರು ಜೀನ್ಸ್ ಪ್ಯಾಂಟ್ ಹಾಗೂ ಹುಡುಗರು ಶಾರ್ಟ್ಸ್ ಧರಿಸದಂತೆ ಆದೇಶ ಹೊರಡಿಸಿದ್ದು, ಒಂದೊಮ್ಮೆ ಈ ನಿಯಮವನ್ನು ಉಲ್ಲಂಘಿಸಿದರೆ ಅಂತವರಿಗೆ ಗ್ರಾಮ ಬಹಿಷ್ಕಾರದ ಜೊತೆಗೆ ದಂಡವನ್ನು ವಿಧಿಸಲಾಗುತ್ತದೆ ಎಂಬ ಎಚ್ಚರಿಕೆ ನೀಡಲಾಗಿದೆ.

ಈ ಶ್ವಾನಗಳ ಮುಖಚರ್ಯೆ ನೋಡಿದ್ರೆ ನೀವು ಶಾಕ್​ ಆಗ್ತೀರಾ..!

ಜೀನ್ಸ್ ಹಾಗೂ ಶಾರ್ಟ್ಸ್ ಪಾಶ್ಚಾತ್ಯ ಶೈಲಿಯ ಉಡುಪುಗಳಾಗಿದ್ದು, ಇವುಗಳು ನಮ್ಮ ಸಂಪ್ರದಾಯಕ್ಕೆ ವಿರುದ್ಧವಾಗಿವೆ. ಈ ಹಿನ್ನೆಲೆಯಲ್ಲಿ ಪಂಚಾಯಿತಿ ವತಿಯಿಂದ ಈ ತೀರ್ಮಾನ ಕೈಗೊಳ್ಳಲಾಗಿದ್ದು ಇದನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಪ್ರಮುಖರು ಎಚ್ಚರಿಸಿದ್ದಾರೆ. ಪಂಚಾಯಿತಿಯ ಈ ತೀರ್ಮಾನವನ್ನು ಬಹುತೇಕ ಗ್ರಾಮಸ್ಥರು ಬೆಂಬಲಿಸಿದ್ದರೆ ಮತ್ತೆ ಕೆಲವರು ಅಪಸ್ವರ ತೆಗೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...