alex Certify ಟ್ರಂಪ್​ ಗೆಲುವಿಗಾಗಿ ಭಾರತದಲ್ಲಿ ಹೋಮ – ಹವನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರಂಪ್​ ಗೆಲುವಿಗಾಗಿ ಭಾರತದಲ್ಲಿ ಹೋಮ – ಹವನ

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಇದೀಗ ಸೋಲು ಗೆಲುವಿನ ಲೆಕ್ಕಾಚಾರ ಜೋರಾಗಿದೆ. ಚುನಾವಣೋತ್ತರ ಸಮೀಕ್ಷೆಗಳು ಈ ಬಾರಿ ಅಮೆರಿಕ ಅಧ್ಯಕ್ಷೀಯ ಪಟ್ಟ ಜೋ ಬಿಡೆನ್​ರಿಗೆ ಸಿಗೋದು ಪಕ್ಕಾ ಎಂದು ಹೇಳುತ್ತಿವೆ.

ಆದರೆ ಅಮೆರಿಕದಲ್ಲಿ ಈ ಬಾರಿಯೂ ಟ್ರಂಪ್​ರೇ ಅಧ್ಯಕ್ಷಗಾದಿ ವಹಿಸಬೇಕೆಂದು ಕೋರಿ ದೆಹಲಿಯಲ್ಲಿ ಹೋಮ – ಹವನ ನಡೆಸಲಾಗಿದೆ. ಹಿಂದೂ ಸೇನೆಯ ನೇತೃತ್ವದಲ್ಲಿ ಈ ಯಜ್ಞ ನಡೆದಿದ್ದು ಟ್ರಂಪ್​​ರ ಫೋಟೋಗೆ ಹೂವುಗಳನ್ನ ಹಾಕಿ, ಹೋಮ – ಹವನ ನಡೆಸೋದ್ರ ಮೂಲಕ ಯಾಗ ನಡೆಸಲಾಯ್ತು. ‌

ಈ ಹಿಂದೆ ಟ್ರಂಪ್​ರ ಜನ್ಮದಿನವನ್ನೂ ಆಚರಿಸಿದ್ದ ಈ ಸೇನೆ ದುಷ್ಟ ಇಸ್ಲಾಮಿಕ್​ ಭಯೋತ್ಪಾದನೆಯಿಂದ ಜಗತ್ತು ಬಚಾವಾಗಬೇಕು ಅಂದರೆ ಟ್ರಂಪ್​ರಂತಹ ಅಧ್ಯಕ್ಷರ ಅವಶ್ಯಕತೆ ಇದೆ ಎಂದು ಹೇಳಿದೆ. ಹಿಂದೂ ಸೇನಾದ ವಿವಾದಾತ್ಮಕ ನಾಯಕ ವಿಷ್ಣು ಗುಪ್ತ ಈ ಯಾಗವನ್ನ ನಡೆಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...