alex Certify ಭಾರತೀಯ ಮೂಲದ ಪ್ರಮೀಳಾ ಜಯಪಾಲ್​ಗೆ ಮತ್ತೊಮ್ಮೆ ಗೆಲವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತೀಯ ಮೂಲದ ಪ್ರಮೀಳಾ ಜಯಪಾಲ್​ಗೆ ಮತ್ತೊಮ್ಮೆ ಗೆಲವು

ಭಾರತೀಯ ಮೂಲದ ಮಹಿಳೆ ಪ್ರಮೀಳಾ ಜಯಪಾಲ್​ ಸತತ ಮೂರನೇ ಬಾರಿಗೆ ಅಮೆರಿಕ ಪ್ರತಿನಿಧಿ ಸಭೆಗೆ ಆಯ್ಕೆಯಾಗಿದ್ದಾರೆ,

ಮೂಲತಃ ಚೆನ್ನೈನವರಾದ ಡೆಮಾಕ್ರಟಿಕ್​ ಪಕ್ಷದ ಪ್ರಮಿಳಾ ಜಯಪಾಲ್​ ರಿಪಬ್ಲಿಕನ್​ ಪಕ್ಷದ ಕ್ರೇಗ್​ ಕೆಲ್ಲರ್​ನ್ನ ಶೇಕಡಾ 70 ಅಂಕಗಳಿಂದ ಸೋಲಿಸುವ ಮೂಲಕ ಮರು ಆಯ್ಕೆಗೊಂಡಿದ್ದಾರೆ.‌

ಕಳೆದ ನಾಲ್ಕು ವರ್ಷಗಳಲ್ಲಿ ಪ್ರಗತಿಪರ ನಾಯಕರ ಸ್ಥಾನದಲ್ಲಿ ಗುರುತಿಸಿಕೊಂಡಿರುವ ಪ್ರಮೀಳಾ 3,44,241 ಮತಗಳನ್ನ ಪಡೆದ್ರೆ, ಕೆಲರ್​ ಕೇವಲ 61,940 ಮತಗಳನ್ನ ಪಡೆಯಲಷ್ಟೇ ಶಕ್ತರಾದರು.

ಜಮ್ಮು ಕಾಶ್ಮೀರದ ವಿಚಾರದಲ್ಲಿ ಭಾರತದ ನಿಲುವು ಹಾಗೂ ಸಿಎಎಯನ್ನ ಟೀಕಿಸಿರುವ ಪ್ರಮಿಳಾ ಜಯಪಾಲ್​, 2016ರಲ್ಲಿ ಮೊದಲ ಬಾರಿಗೆ ಅಮೆರಿಕ ಪ್ರತಿನಿಧಿ ಸಭೆಗೆ ಆಯ್ಕೆಯಾಗಿದ್ದರು. ಈ ಮೂಲಕ ಅಮೆರಿಕ ಪ್ರತಿನಿಧಿ ಸಭಾಗೆ ಆಯ್ಕೆಯಾದ ಮೊದಲ ಭಾರತೀಯ ಮೂಲದ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...