alex Certify ವಿಶಿಷ್ಟ ರೀತಿಯಲ್ಲಿ ಮಕ್ಕಳಿಗೆ ‌ʼಕೊರೊನಾʼ ಅರ್ಥ ಮಾಡಿಸಿದ ಪೊಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶಿಷ್ಟ ರೀತಿಯಲ್ಲಿ ಮಕ್ಕಳಿಗೆ ‌ʼಕೊರೊನಾʼ ಅರ್ಥ ಮಾಡಿಸಿದ ಪೊಲೀಸ್

ಕೋವಿಡ್-19 ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರ ಸಾಕಷ್ಟು ಹರಸಾಹಸ ಪಡುತ್ತಿದೆ. ಇದೀಗ ಉತ್ತರ ಪ್ರದೇಶದ ಪೊಲೀಸರು ಮಕ್ಕಳಿಗೆ ಅದರ ಬಗ್ಗೆ ಜಾಗೃತಿ ಮೂಡಿಸಲು ಅನಿಮೇಟೆಡ್ ಕ್ಲಿಪ್ ಗಳನ್ನು ಬಳಸಿ ಗಮನ ಸೆಳೆದಿದ್ದಾರೆ.

ಚಿಕ್ಕ ಹುಡುಗ ಮತ್ತು ಆತನ ಅಕ್ಕ ಪೊಲೀಸ್ ಅಧಿಕಾರಿಯೊಂದಿಗೆ ದೂರವಾಣಿಯಲ್ಲಿ ತೊಡಗಿ ಸಂಭಾಷಣೆ ನಡೆಸಿದಂತೆ, ವೈರಸ್ ಹೇಗೆ ಅತ್ಯಂತ ಕುಖ್ಯಾತ ಹಾಗೂ ಅದನ್ನು ಬಂಧಿಸಲು ಕೊರೋನಾ ವಾರಿಯರ್ ಗಳು ಹೇಗೆ ಕಾರ್ಯ ನಿರ್ವಹಿಸುತ್ತಾರೆ ಎಂಬುದನ್ನು ಪೊಲೀಸ್ ಅಧಿಕಾರಿ ಮಕ್ಕಳಿಗೆ ಅರ್ಥ ಮಾಡಿಸುವ ಒಂದು ಅನಿಮೇಟೆಡ್ ತುಣುಕು ಗಮನ ಸೆಳೆಯುತ್ತಿದೆ.

ವೈರಸ್ ನಿಯಂತ್ರಿಸುವವರೆಗೂ ಮನೆಯೊಳಗೆ ಇರಬೇಕೆಂದು ಪೊಲೀಸ್  ಅಧಿಕಾರಿ ಸಲಹೆ ನೀಡಿರುವುದರೊಂದಿಗೆ ಕ್ಲಿಪ್ ಕೊನೆಗೊಳ್ಳುತ್ತದೆ. ಈ ಕಿರು ಅನಿಮೇಶನ್ ತುಣುಕುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಮತ್ತು ವಾಟ್ಸಪ್ ಮೂಲಕ ವೈರಲ್ ಮಾಡಲಾಗಿದೆ.

ಐಜಿ ರಮೇಶ್ ಶರ್ಮಾ ಹೇಳುವಂತೆ, ಈ ಪ್ರಯತ್ನದ ಮೂಲಕ ನಾವು ಮಕ್ಕಳನ್ನು ತಲುಪುವಲ್ಲಿ ಯಶಸ್ವಿಯಾಗಿದ್ದೇವೆ ಮತ್ತು ಕೊರೋನ ಸೋಲಿಸಲು ಅವರು ಮನೆಯೊಳಗೆ ಏಕೆ ಇರಬೇಕೆಂದು ಅರ್ಥ ಮಾಡಿಸಿದ್ದೇವೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...