alex Certify SHOCKING: ಕಾಲೇಜು ಕೊಠಡಿಯಲ್ಲೇ ವಿದ್ಯಾರ್ಥಿ ಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಕಾಲೇಜು ಕೊಠಡಿಯಲ್ಲೇ ವಿದ್ಯಾರ್ಥಿ ಹತ್ಯೆ

ಕಾಲೇಜು ವಿದ್ಯಾರ್ಥಿಯೊಬ್ಬ ಕ್ಲಾಸ್ ರೂಂನಲ್ಲಿ ವಿದ್ಯಾರ್ಥಿ ಮೇಲೆ ಫೈರಿಂಗ್​ ನಡೆಸಿದ್ದು ಮಾತ್ರವಲ್ಲದೇ ವಿದ್ಯಾರ್ಥಿನಿಯೊಬ್ಬಳ ಮನೆಗೆ ನುಗ್ಗಿ ಆಕೆಯನ್ನ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶ ಬುಂದೇರ್​ ಖಂಡ್​ ಕಾಲೇಜಿನಲ್ಲಿ ನಡೆದಿದೆ.‌

ಸಂತ್ರಸ್ತರು ಹಾಗೂ ಆರೋಪಿ ಕೊನೆಯ ವರ್ಷದ ಪದವಿ ವಿದ್ಯಾರ್ಥಿಗಳಾಗಿದ್ದಾರೆ. ತ್ರಿಕೋನ ಪ್ರೇಮವೇ ಈ ಘಟನೆಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.

ಕೃತಿಕಾ ತ್ರಿಪಾಠಿ ಎಂಬ ವಿದ್ಯಾರ್ಥಿನಿಯನ್ನ ಚಾಣಕ್ಯಾಪುರಿ ಮನೆಯಲ್ಲಿ ಕೊಲೆ ಮಾಡಲಾಗಿದೆ. ಹಾಗೂ ತಲೆಯ ಹಿಂಭಾಗಕ್ಕೆ ಗುಂಡೇಟು ತಿಂದಿರುವ ಹುಕುಮ್​ಚಂದ್​ ಗುರ್ಜರ್​ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ ಎಂದು ಹಿರಿಯ ಪೊಲೀಸ್​ ಅಧಿಕಾರಿ ದಿನೇಶ್​ ಕುಮಾರ್​ ಪಿ. ಮಾಹಿತಿ ನೀಡಿದ್ದಾರೆ.

ಆರೋಪಿ ಮಂಥನ್​ ಸಿಂಗ್​ ಸೇಂಗಾರ್​ ಎಂಬಾತನನ್ನ ಬಂಧಿಸಲಾಗಿದ್ದು ಆತನಿಂದ ಪಿಸ್ತೂಲ್​​ ಹಾಗೂ ಲೈವ್​ ಕಾರ್ಟಿಜ್​​ಗಳನ್ನ ವಶಪಡಿಸಿಕೊಳ್ಳಲಾಗಿದೆ.

ತರಗತಿಯ ಒಳಗೆ ಗುರ್ಜರ್​ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸುವ ಮೊದಲು ಸೇಂಗಾರ್​ ಬೋರ್ಡ್​ ಮೇಲೆ ಹೃದಯದ ಚಿತ್ರ ಬಿಡಿಸಿ ‘ಮಂಥನ್​ ಫಿನಿಶ್​’ ಎಂದು ಬರೆದಿದ್ದ. ಇದನ್ನ ನೋಡಿದ ಪೊಲೀಸರು ಬಹುಶಃ ಇದು ತ್ರಿಕೋನ ಪ್ರೇಮ ಕತೆ ಇರಬಹುದೆಂದು ಅಂದಾಜಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...