alex Certify ಕಣ್ಣೆದುರಲ್ಲೇ ನಡೆದ ಘಟನೆಯಿಂದ ಬೆಚ್ಚಿಬಿದ್ದ ಜನ: ಗೆಳೆಯನ ಮನೆಯಲ್ಲಿದ್ದ ಪುತ್ರಿಯನ್ನು ಎಲ್ಲರೆದುರಲ್ಲೇ ಕೊಚ್ಚಿ ಕೊಂದ ತಂದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣೆದುರಲ್ಲೇ ನಡೆದ ಘಟನೆಯಿಂದ ಬೆಚ್ಚಿಬಿದ್ದ ಜನ: ಗೆಳೆಯನ ಮನೆಯಲ್ಲಿದ್ದ ಪುತ್ರಿಯನ್ನು ಎಲ್ಲರೆದುರಲ್ಲೇ ಕೊಚ್ಚಿ ಕೊಂದ ತಂದೆ

ಕಾನ್ಪುರ್:  ಗೆಳೆಯನ ಮನೆಯಲ್ಲಿದ್ದ 18 ವರ್ಷದ ಹುಡುಗಿಯನ್ನು ಆಕೆಯ ತಂದೆಯೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಕಾನ್ಪುರ್ ಜಿಲ್ಲೆಯಲ್ಲಿ ನಡೆದಿದೆ.

ಗಜ್ನೇರ್ ಪೊಲೀಸ್ ಠಾಣೆ ವ್ಯಾಪ್ತಿಯ ಖಾನ್ ಪನ್ನಾ ಗ್ರಾಮದಲ್ಲಿ ಘಟನೆ ನಡೆದಿದೆ. ಹುಡುಗಿ ಗೆಳೆಯನ ಮನೆಗೆ ಹೋಗಿರುವ ಬಗ್ಗೆ ತಂದೆಗೆ ಗೊತ್ತಾಗಿದೆ. ಗೆಳೆಯನ ಮನೆಯಲ್ಲಿ ಇರುವ ಮಗಳು ಬಗ್ಗೆ ತನ್ನ ಸ್ನೇಹಿತನಿಂದ ತಿಳಿದುಕೊಂಡ ತಂದೆ ಸಂಬಂಧಿಕರೊಂದಿಗೆ ಅಲ್ಲಿಗೆ ತೆರಳಿದ್ದಾನೆ. ಕೊಡಲಿಯೊಂದಿಗೆ ಬಂದಿದ್ದ ಆರೋಪಿ ಮನೆಗೆ ಬರುವಂತೆ ಮಗಳಿಗೆ ತಾಕೀತು ಮಾಡಿದ್ದಾನೆ. ಮಗಳು ಮನೆಗೆ ವಾಪಸಾಗಲು ವಾದ ಮಾಡಿದಾಗ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

ಎಲ್ಲರೆದುರಲ್ಲಿ ಮಗಳ ಮೇಲೆ ದಾಳಿ ಮಾಡಿದ ಆರೋಪಿ ಆಕೆ ಮೃತಪಟ್ಟರೂ ಕೊಡಲಿಯಿಂದ ಥಳಿಸಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಕಣ್ಣೆದುರಲ್ಲೇ ನಡೆದ ಭೀಕರ ಹತ್ಯೆಯಿಂದ ಜನ ಬೆಚ್ಚಿಬಿದ್ದಿದ್ದಾರೆ. ಹುಡುಗಿಯನ್ನು ಪಾರುಮಾಡಲು ಬಂದ ಗೆಳೆಯನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದು ಆತನ ಸ್ಥಿತಿ ಗಂಭೀರವಾಗಿದೆ ಎಂದು ಕಾನ್ಪುರ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಕುಮಾರ್ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...