alex Certify ಕೊರೊನಾ ಹತ್ತಿಕ್ಕಲು ಹಪ್ಪಳ ಸಹಕಾರಿ ಎಂದಿದ್ದ ಸಚಿವರಿಗೆ ಕೊರೊನಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಹತ್ತಿಕ್ಕಲು ಹಪ್ಪಳ ಸಹಕಾರಿ ಎಂದಿದ್ದ ಸಚಿವರಿಗೆ ಕೊರೊನಾ…!

ಕೇಂದ್ರ ಕೈಗಾರಿಕೆ ಸಹಾಯಕ‌ ಸಚಿವ ಅರ್ಜುನ್ ರಾಮ್ ಮೇಘವಾಲ್ ಗೆ ಕೊರೊನಾ ವಕ್ಕರಿಸಿದ್ದು, ಅವರು ಈಗ ದೆಹಲಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎರಡು ಬಾರಿ ಪರೀಕ್ಷೆಗಳೊಪಟ್ಟಿದ್ದು, ಎರಡನೇ ವರದಿಯಲ್ಲಿ ಕೊರೊನಾ ಸೋಂಕಿರುವುದು ದೃಢಪಟ್ಟಿತ್ತು.

ತಮಗೆ ಕೊರೊನಾ ಇರುವುದು ಧೃಡಪಟ್ಟ ನಂತರ ವೈದ್ಯರ ಸಲಹೆ ಮೇರೆಗೆ ಏಮ್ಸ್ ನಲ್ಲಿ ದಾಖಲಾಗಿದ್ದೇನೆ, ನನ್ನೊಂದಿಗೆ ಸಂಪರ್ಕಕ್ಕೆ ಬಂದ ಎಲ್ಲರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ವಿನಂತಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ಅರ್ಜುನ್ ರಾಮ್ ಮೇಘವಾಲ್ ಅವರು ಬಿಕಾನೆರ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಜುಲೈ ವೇಳೆ ಅವರು ಪಾಪಡ್ ನಿಂದ ಕೊರೊನಾ ನಿಯಂತ್ರಿಸಬಹುದು ಎಂದು ಹೇಳಿಕೆ ಕೊಟ್ಟಿದ್ದರು. ಅದರ ವಿಡಿಯೋ ವೈರಲ್ ಆಗಿತ್ತು. ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುವ ಶಕ್ತಿ ಹಪ್ಪಳಕ್ಕಿದೆ ಎಂದು ಹೇಳಿದ್ದರು.

ವೋಕಲ್ ಫಾರ್ ಲೋಕಲ್ ಕ್ಯಾಂಪೇನ್ ನಡೆಯುತ್ತಿದ್ದು, ಈ ವೇಳೆ ಭಾಬೀ ಜಿ ಪಾಪಡ್ ರೋಗ ನಿರೋಧಕ ಶಕ್ತಿ ಹೊಂದಿದೆ ಎಂದಿದ್ದರು ಈ ಸಚಿವರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...