alex Certify ಒಂದು ನಿಮಿಷದಲ್ಲಿ 39 ವಿಮಾನ ಗುರುತಿಸಿ ವಿಶ್ವ ದಾಖಲೆ ಬರೆದ ಬಾಲಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದು ನಿಮಿಷದಲ್ಲಿ 39 ವಿಮಾನ ಗುರುತಿಸಿ ವಿಶ್ವ ದಾಖಲೆ ಬರೆದ ಬಾಲಕ

ಅಬುದಾಬಿ: ಯುನೈಟೆಡ್‌ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿರುವ ಭಾರತೀಯ ಮೂಲದ 12 ವರ್ಷದ ಬಾಲಕನೊಬ್ಬ ಒಂದು ನಿಮಿಷದಲ್ಲಿ 39 ವಿಮಾನಗಳ ಹಿಂಬದಿ ರೆಕ್ಕೆಗಳನ್ನು ಗುರುತಿಸಿ ಗಿನ್ನೆಸ್ ವಿಶ್ವ ದಾಖಲೆ ಬರೆದಿದ್ದಾನೆ.

ಹರಿಯಾಣ ಮೂಲದ ಸದ್ಯ ಅಬುದಾಬಿಯಲ್ಲಿರುವ ಸಿದ್ದಾಂತ ಗುಂಬೆರ್ ಈ ಸಾಧನೆ ಮಾಡಿದ್ದಾನೆ. ಈ ಹಿಂದೆ ಆತ ಯುಎಇಯ 100 ಅತಿ ಎತ್ತರದ ಕಟ್ಟಡಗಳನ್ನು ಗುರುತಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರು ದಾಖಲಿಸಿದ್ದ.

“ನಾನು ಚಿಕ್ಕವನಿದ್ದಾಗಿನಿಂದ ನನ್ನ ಅಪ್ಪ ನನಗೆ ಕಲ್ಲುಗಳು, ಮಾದರಿಗಳು, ವಿವಿಧ ಕಂಪನಿಗಳ ಕಾರುಗಳನ್ನು ತೋರಿಸುತ್ತಿದ್ದರು.‌ ಅದೇ ನನಗೆ ಗೀಳಾಗಿ ಬೆಳೆಯಿತು. ಈಗ ನನ್ನ ದಾಖಲೆಗೆ ತಾಯಿ ಸಹಕಾರ ಮಾಡಿದರು” ಎಂದು ಸಿದ್ಧಾಂತ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...