alex Certify ಮರ ಕಣ್ಣು ಬಿಟ್ಟಂತಿರುವ ಫೋಟೋ ಹಿಂದಿನ ಕಾರಣ ತಿಳಿದ ನೆಟ್ಟಿಗರಿಗೆ ಅಚ್ಚರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮರ ಕಣ್ಣು ಬಿಟ್ಟಂತಿರುವ ಫೋಟೋ ಹಿಂದಿನ ಕಾರಣ ತಿಳಿದ ನೆಟ್ಟಿಗರಿಗೆ ಅಚ್ಚರಿ…!

ಗಿಡ-ಮರಗಳಲ್ಲಿ ಹಣ್ಣು ಬಿಡುವುದು ಸಾಮಾನ್ಯ. ಆದರೆ, ಈ ಮರ ಕಣ್ಣು ಬಿಟ್ಟಂತೆ ಕಾಣುತ್ತಿದೆ. ಸ್ವಲ್ಪ ಕಣ್ಣು ಬಿಟ್ಟು ನೋಡಿ…..

ಅರೆ, ಹೌದಲ್ವಾ ? ಇದೇನಿದು ? ಎಲ್ಲಿಯಾದರೂ ಮರ-ಗಿಡಗಳು ಕಣ್ಣು ಬಿಡುವುದೆಂಟೆ ? ಇದು ಸಾಧ್ಯವೇ ಎಂದು ಯೋಚಿಸುತ್ತಿರುವಿರಾ ?

ಇದು ಮರ ಕಣ್ಣು ಬಿಟ್ಟಿರುವುದಲ್ಲ. ಮರದ ಪೊಟರೆ ಹೊಕ್ಕಿ ಕುಳಿತ ಗೂಬೆಯೊಂದು ಬಿಟ್ಟ ಕಣ್ಣು.

ನಿಶಾಚರಿಯಾದ ಗೂಬೆ ಕಳ್ಳನಂತೆ ಒಂದು ಕಣ್ಣು ಪೊಟರೆಯಿಂದ ಹೊರಹಾಕಿ ಇಣುಕುತ್ತಿರುವ ಈ ಫೋಟೋ ಭಾರೀ ವೈರಲ್ ಆಗಿದೆ.

ಐಎಫ್ಎಸ್ ಅಧಿಕಾರಿ ಸುಸಾಂತ್ ನಂದ ಅವರು ಟ್ವಿಟ್ಟರ್ ನಲ್ಲಿ ಫೋಟೋ ಪೋಸ್ಟ್ ಮಾಡಿದ್ದು, ಸಾವಿರಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಶೇಷವೆಂದರೆ, ಹೀಗೆ ಮರದ ಪೊಟರೆಯಲ್ಲಿ ಕಣ್ ಕಣ್ ಬಿಡುತ್ತಾ ಕುಳಿತ ಗೂಬೆಯ ವಿವಿಧ ಭಂಗಿಯ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

— Susanta Nanda IFS (@susantananda3) August 18, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...