alex Certify ರೈಲಿನ ಎಸಿ ಕೋಚ್​​ಗಳಲ್ಲಿ ಮಾತ್ರ ಕಳ್ಳತನ ಮಾಡ್ತಿದ್ದವ ಅಂದರ್..​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲಿನ ಎಸಿ ಕೋಚ್​​ಗಳಲ್ಲಿ ಮಾತ್ರ ಕಳ್ಳತನ ಮಾಡ್ತಿದ್ದವ ಅಂದರ್..​..!

ಹೈದರಾಬಾದ್​ನಲ್ಲಿ ರೈಲುಗಳಲ್ಲಿನ ಎಸಿ ಕೋಚ್​ಗಳಿಗೆ ಮಾತ್ರ ಎಂಟ್ರಿ ನೀಡಿ ಕಳ್ಳತನ ಮಾಡ್ತಿದ್ದ ವಿಚಿತ್ರ ಕಳ್ಳನನ್ನ ಬಂಧಿಸಲಾಗಿದೆ. ಪದವಿಧರನಾಗಿರುವ ಮದ್ದೂರಿ ವೆಂಕಟ ವಿವೇಕಾನಂದನನ್ನ ಸೆಕುಂದರಾಬಾದ್​​ನ ರೈಲ್ವೆ ನಿಲ್ದಾಣದ ಪೊಲೀಸರು ಬಂಧಿಸಿದ್ದಾರೆ.

ಆಂಧ್ರ ಪ್ರದೇಶದಿಂದ ಹೈದಾರಾಬಾದ್​ ಕಡೆ ಬರುವ ರೈಲುಗಳಲ್ಲೇ ಈತ ಹೆಚ್ಚಾಗಿ ಕಳ್ಳತನ ಮಾಡುತ್ತಿದ್ದ. ಪೊಲೀಸರು ಈ ಹೈಟೆಕ್​ ಕಳ್ಳನಿಂದ 3.50 ಲಕ್ಷ ರೂಪಾಯಿ ಮೌಲ್ಯದ 52 ಗ್ರಾಂ ಚಿನ್ನಾಭರಣ, ಒಂದು ಲ್ಯಾಪ್​ಟಾಪ್​ ಹಾಗೂ ನಗದನ್ನ ವಶಪಡಿಸಿಕೊಂಡಿದ್ದಾರೆ. ಈತನ ವಿರುದ್ಧ ತೆಲಂಗಾಣ ಹಾಗೂ ಆಂಧ್ರ ಪ್ರದೇಶಗಳಲ್ಲಿ 16 ಪ್ರಕರಣಗಳು ದಾಖಲಾಗಿವೆ.

ಗುಂಟೂರು ಹಾಗೂ ವಿಜಯವಾಡದಲ್ಲಿ ಪ್ರಕರಣ ದಾಖಲಾಗಿದ್ದರಿಂದ ಈತನನ್ನ ಈ ಹಿಂದೆಯೂ ಬಂಧಿಸಲಾಗಿತ್ತು. 2020ರಲ್ಲಿ ಜಾಮೀನಿನ ಮೇಲೆ ಹೊರಗಿದ್ದ ಈತ ಲಾಕ್​ಡೌನ್​ನಿಂದಾಗಿ ರೈಲುಗಳು ರದ್ದಾಗಿದ್ದರಿಂದ ಈತ ಕೆಲ ಸಮಯ ಕಳ್ಳತನ ಮಾಡದೇ ವಿರಾಮ ಪಡೆದಿದ್ದ. ಆದರೆ ಕೆಲ ದಿನಗಳ ಹಿಂದೆ ಮತ್ತೊಮ್ಮೆ ದರೋಡೆ ನಡೆಸಿದ್ದಾನೆ.

ಆಂಧ್ರ ಪ್ರದೇಶ ಮಚಲಿಪಟ್ಟಣಂ ಮೂಲದ ಈತ ಪದವಿ ಮಾಡೋದನ್ನ ಅರ್ಧದಲ್ಲೇ ನಿಲ್ಲಿಸಿ ಗಚಿಬೌಲಿ ಟೆಕ್​ ಸಂಸ್ಥೆಯನ್ನ ಸೇರಿಕೊಂಡಿದ್ದ. ಈತನ ಪತ್ನಿ ಹಾಗೂ ಪೋಷಕರು ಮಚಲಿಪಟ್ಟಣಂನಲ್ಲೇ ಇದ್ದಾರೆ. ಎಸಿ ಕೋಚ್​ನಲ್ಲೇ ಪ್ರಯಾಣಿಸುವ ಈತ ಯಾರೊಂದಿಗೂ ಮಾತನಾಡೋದಿಲ್ಲ. ಎಲ್ಲರೂ ಮಲಗಿದ್ದ ವೇಳೆ ಬ್ಯಾಗ್​​ಗಳನ್ನ ಕದ್ದು ಎಸ್ಕೇಪ್​ ಆಗ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...