alex Certify ಹಿಮಪಾತದ ಅದ್ಭುತ ವಿಡಿಯೋ ಹಂಚಿಕೊಂಡ ಭಾರತೀಯ ರೈಲ್ವೇ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಮಪಾತದ ಅದ್ಭುತ ವಿಡಿಯೋ ಹಂಚಿಕೊಂಡ ಭಾರತೀಯ ರೈಲ್ವೇ…!

ಭಾರತೀಯ ರೈಲ್ವೆ ಸಚಿವಾಲಯು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಿಮಾಚಲ ಪ್ರದೇಶದ ತಾರಾದೇವಿ ನಿಲ್ದಾಣದಲ್ಲಿ ಹಿಮಪಾತದ ಕಾರಣದಿಂದಾಗಿ ಚಲಿಸಲಾಗದೇ ನಿಂತ ರೈಲಿನ ವಿಡಿಯೋವನ್ನ ಶೇರ್ ಮಾಡಿದೆ.

ಸಂಪೂರ್ಣ ಹಿಮದ ಹೊದಿಕೆಯಿಂದ ಆವೃತವಾದ ಈ ನಯನಮನೋಹರ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

ಶಿಮ್ಲಾ – ಕಲ್ಕಾ ಮಾರ್ಗದಲ್ಲಿ ಸಂಚರಿಸುತ್ತಿದ್ದ ರೈಲು ತಾರಾದೇವಿ ನಿಲ್ದಾಣದಲ್ಲಿ ಸಂಚಾರ ಸ್ಥಗಿತಗೊಳಿಸಿದೆ. ನಿಲ್ದಾಣದಲ್ಲಿ ರೈಲಿಗೆ ಕಾಯುತ್ತಿದ್ದ ಪ್ರಯಾಣಿಕರು ಈ ಸುಂದರ ವಿಡಿಯೋವನ್ನ ಚಿತ್ರೀಕರಿಸಿದ್ದಾರೆ.

ಶಿಮ್ಲಾ – ಕಲ್ಕಾ ಪಾರಂಪರಿಕ ಮಾರ್ಗದ ತಾರಾದೇವಿ ನಿಲ್ದಾಣ ಹಿಮದ ಹೊದಿಕೆಯಿಂದಾವೃತವಾಗಿದೆ. ಇದೊಂದು ಅದ್ಭುತ ದೃಶ್ಯವಾಗಿದೆ ಎಂದು ರೈಲ್ವೆ ಸಚಿವಾಲಯ ವಿಡಿಯೋಗೆ ಶೀರ್ಷಿಕೆ ನೀಡಿದೆ.

— Ministry of Railways (@RailMinIndia) February 5, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...