alex Certify ಮೆಡಿಕಲ್​ ತ್ಯಾಜ್ಯದಿಂದ ತಯಾರಾಯ್ತು ದುರ್ಗಾ ಮೂರ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೆಡಿಕಲ್​ ತ್ಯಾಜ್ಯದಿಂದ ತಯಾರಾಯ್ತು ದುರ್ಗಾ ಮೂರ್ತಿ

ನವರಾತ್ರಿ ಹಬ್ಬದ ಪ್ರಯುಕ್ತ ಈಗಾಗಲೇ ಅನೇಕ ಮೂರ್ತಿ ತಯಾರಕರು ಕರೊನಾ ವಿರುದ್ದ ಜಾಗೃತಿ ಸಾರುವ ದುರ್ಗೆಯ ಮೂರ್ತಿಯನ್ನ ತಯಾರಿಸಿದ್ದಾರೆ. ಈ ಸಾಲಿಗೆ ಇದೀಗ ಇನ್ನೊಬ್ಬ ಕಲಾವಿದ ಸೇರಿದ್ದು ಮೆಡಿಕಲ್​ ತ್ಯಾಜ್ಯಗಳನ್ನ ಬಳಸಿ ದುರ್ಗೆಯನ್ನ ರಚಿಸಿದ್ದಾರೆ.

ಅಸ್ಸಾಂ ಮೂಲದ ಕಲಾವಿದ ಸಂಜೀಬ್​ ಬಸಾಕ್​ ಎಂಬವರು ಮಾತ್ರೆ ಹಾಗೂ ಸಿರೀಂಜ್​ಗಳನ್ನ ಬಳಸಿ 60 ದಿನಗಳ ಕಾಲ ಪರಿಶ್ರಮ ಪಟ್ಟು ಈ ಮೂರ್ತಿಯನ್ನ ನಿರ್ಮಾಣ ಮಾಡಿದ್ದಾರೆ. ಬಸಾಕ್​ ಕಳೆದ 8 ವರ್ಷಗಳಿಂದ ಈ ರೀತಿ ತ್ಯಾಜ್ಯ ಪದಾರ್ಥಗಳನ್ನ ಬಳಸಿ ದುರ್ಗೆಯ ಮೂರ್ತಿಯನ್ನ ತಯಾರು ಮಾಡ್ತಾ ಬಂದಿದ್ದಾರೆ. ಈ ಹಿಂದೆ ಬೆಂಕಿ ಕಡ್ಡಿ, ವೈರ್​​ ಸೇರಿದಂತೆ ವಿವಿಧ ವಸ್ತುಗಳನ್ನ ಬಳಕೆ ಮಾಡ್ತಿದ್ದ ಬಸಾಕ್​ ಈ ಬಾರಿ ಮೆಡಿಕಲ್​ ತ್ಯಾಜ್ಯಗಳನ್ನ ಬಳಸಿದ್ದಾರೆ.

ಕಳೆದ ವರ್ಷ ಎಲೆಕ್ಟ್ರಿಕಲ್​ ವೈರ್​ ಬಳಸಿ 166 ಕೆಜಿ ತೂಕದ ದೇವಿಯ ಮೂರ್ತಿ ನಿರ್ಮಾಣ ಮಾಡಿದ್ದ ಬಸಾಕ್​ ಹೆಸರನ್ನ ಆಸ್ಸಾಂ ಬುಕ್​ ಆಫ್​ ರೆಕಾರ್ಡ್ಸ್​ನಲ್ಲಿ ನಮೂದಿಸಲಾಗಿದೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಬಸಾಕ್, ಮೂರ್ತಿಯನ್ನ ನಿರ್ಮಾಣ ಮಾಡೋಕೆ ನಾನು ಪ್ರತಿ ವರ್ಷ ಹೊಸ ಐಡಿಯಾಗಳನ್ನ ಹುಡುಕ್ತಾ ಇದ್ದೆ. ಈ ವರ್ಷ ಲಾಕ್​ಡೌನ್​ ಸಮಯದಲ್ಲಿ ಜನರು ಮೆಡಿಕಲ್​ ಮುಂದೆ ಕ್ಯೂ ನಿಂತಿರೋದನ್ನ ನೋಡಿದ್ದೆ. ಎಷ್ಟೋ ಜನ ಔಷಧಿ ಸಿಗದೇ ಪರದಾಡೋದನ್ನೂ ನಾನು ಕಂಡಿದ್ದೆ. ಹೀಗಾಗಿ ಈ ಬಾರಿ ಮೆಡಿಕಲ್​ ವೇಸ್ಟೇಜ್​ ಬಳಸಿ ಮೂರ್ತಿ ತಯಾರು ಮಾಡೋ ನಿರ್ಧಾರಕ್ಕೆ ಬಂದೆ ಅಂತಾ ಹೇಳಿದ್ರು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...