alex Certify ರಾತ್ರೋ ರಾತ್ರಿ ಹಿಟ್​ ಆಯ್ತು ‘ಬಾಬಾ ಕಾ ಡಾಬಾ’: ಯಶಸ್ಸಿನ ಹಿಂದಿನ ಗುಟ್ಟೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರೋ ರಾತ್ರಿ ಹಿಟ್​ ಆಯ್ತು ‘ಬಾಬಾ ಕಾ ಡಾಬಾ’: ಯಶಸ್ಸಿನ ಹಿಂದಿನ ಗುಟ್ಟೇನು ಗೊತ್ತಾ…?

ಕಳೆದ ವಾರವಷ್ಟೇ ಸಾಮಾಜಿಕ ಜಾಲತಾಣದಲ್ಲಿ ವೃದ್ಧ ದಂಪತಿ ಅಳ್ತಾ ಇದ್ದ ವಿಡಿಯೋ ಒಂದು ವೈರಲ್​ ಆಗಿತ್ತು. ಫುಡ್​ ಬ್ಲಾಗರ್​ ಗೌರವ್​ ವಾಸನ್​ ಶೇರ್ ಮಾಡಿದ್ದ ವಿಡಿಯೋದಲ್ಲಿ ಆ ವೃದ್ಧ ದಂಪತಿ ತಮ್ಮ ಡಾಬಾದಲ್ಲಿ ಗ್ರಾಹಕರೇ ಬರ್ತಿಲ್ಲ ಅಂತಾ ಕಣ್ಣೀರು ಹಾಕ್ತಿದ್ರು.

ಆ ವಿಡಿಯೋ ಎಷ್ಟರ ಮಟ್ಟಿಗೆ ಜನಮನ್ನಣೆ ಗಳಿಸ್ತು ಅಂದ್ರೆ ಮಾರನೇ ದಿನವೇ ಅಂಗಡಿ ತುಂಬ ಜನವೋ ಜನ. ಒಂದು ದಿನದ ಹಿಂದೆ ಅತ್ತುಕ್ಕೊಂಡು ಮಾತನಾಡಿದ್ದ ವೃದ್ಧ ಕಾಂತಾ ಪ್ರಸಾದ್​ ಮರುದಿನವೇ ಸಂತೋಷದ ನಗೆ ಬೀರಿದ್ರು.

ಇದೀಗ ಉತ್ತಮ ವ್ಯವಹಾರ ನಡೆಸ್ತಾ ಇರೋ ಪ್ರಸಾದ್​ ತಮ್ಮ ದಾಂಪತ್ಯದ ಬಗ್ಗೆ ಕೆಲ ವಿಚಾರಗಳನ್ನ ಹೇಳಿಕೊಂಡಿದ್ದಾರೆ. ಕಾಂತಾ ಪ್ರಸಾದ್​ ಹಾಗೂ ಬಾದಾಮಿ ದೇವಿಯವರಿಗೆ ವಿವಾಹವಾಗಿದ್ದಾಗ ಪ್ರಸಾದ್​​ಗೆ ಆಗಿನ್ನೂ 5 ವರ್ಷ. ಬಾದಾಮಿ ದೇವಿಯಂತೂ ಮೂರು ವರ್ಷದ ಕಂದಮ್ಮ.

ಉತ್ತರ ಪ್ರದೇಶ ಅಝಮ್​ಗರಂನಲ್ಲಿ ಮದುವೆಯಾಗಿದ್ದ ಈ ಜೋಡಿಗೆ ಆಗ ದಾಂಪತ್ಯ ಎಂದ್ರೆ ಏನು ಅಂತಾ ತಿಳಿಯದ ವಯಸ್ಸು. ವರ್ಷಕ್ಕೊಮ್ಮೆ ಮಾತ್ರ ಭೇಟಿಯಾಗ್ತಿದ್ದ ಇವ್ರಿಬ್ಬರು ಒಳ್ಳೆಯ ಸ್ನೇಹಿತರಾಗಿದ್ದರಂತೆ.

ಪ್ರಸಾದ್ಗೆಗೆ 21 ವರ್ಷ ವಯಸ್ಸಾಗ್ತಿದ್ದಂತೆ ಬಾದಾಮಿ ದೇವಿ ಇವರ ಮನೆಗೆ ಬಂದ್ರು. ಅಲ್ಲಿಂದ ಇವರಿಬ್ಬರ ಸ್ನೇಹ ಪ್ರೀತಿಯಾಗಿ ಬದಲಾಯ್ತು. 1961ರ ವೇಳೆಗೆ ದೆಹಲಿಗೆ ತೆರಳಿದ ಈ ದಂಪತಿ ಹಣ್ಣಿನ ವ್ಯಾಪಾರದ ಉದ್ಯಮ ಆರಂಭಿಸಿದ್ರು. ಬೆಳಗ್ಗೆ ಪ್ರಸಾದ್​ ಅಂಗಡಿಯನ್ನ ನೋಡಿಕೊಂಡ್ರೆ ಮಧ್ಯಾಹ್ನ ಬಾದಾಮಿ ದೇವಿ ಈ ಜವಾಬ್ದಾರಿಯನ್ನ ನಿಭಾಯಿಸ್ತಾ ಇದ್ರಂತೆ .

ಕುಟುಂಬ ದೊಡ್ಡದಾಗ್ತಾ ಇದ್ದಂತೆ ಹಣದ ಅವಶ್ಯಕತೆಯೂ ಹೆಚ್ಚಾಯ್ತು. ಕಾಲಾಂತರದಲ್ಲಿ ತರಕಾರಿ ಮಾರೋಕೆ ಶುರು ಮಾಡಿದ್ವಿ. ಬಳಿಕ ಚಹಾ ಅಂಗಡಿಯನ್ನ ಮಾಡಿದೆ. ಅನೇಕ ಬಾರಿ ನನಗೆ ಲಾಭಕ್ಕಿಂತ ಹೆಚ್ಚು ನಷ್ಟವಾಗಿದ್ದೇ ಇದೆ. ಆದರೆ ಬಾದಾಮಿಗೆ ಮಾತ್ರ ನನ್ನ ಮೇಲಿದ್ದ ನಂಬಿಕೆ ಕಡಿಮೆಯೇ ಆಗಿಲ್ಲ. ನನಗೆ ಅವಳಿಲ್ಲ ಅಂದರೆ ಯಾವ ಹೆಜ್ಜೆ ಇಡೋಕೂ ಭಯ ಅಂತಾರೆ ಪ್ರಸಾದ್​.

50 ವರ್ಷ ವಯಸ್ಸಿನವನಿದ್ದಾಗ ‘ಬಾಬಾ ಕಾ ಡಾಬಾ’ ಶುರು ಮಾಡಿದೆ. ನಾನು ಅಡುಗೆ ಮಾಡಿದ್ರೆ ಬಾದಾಮಿ ದೇವಿ ನನ್ನ ಸಹಾಯಕಿಯಾಗಿ ಕೆಲಸ ಮಾಡ್ತಾಳೆ. ನಮ್ಮಲ್ಲಿ ಇದು ಪುರುಷರ ಕೆಲಸ , ಇದು ಮಹಿಳೆ ಮಾಡೋ ಕೆಲಸ ಅನ್ನೋದು ಬಂದೇ ಇಲ್ಲ . ಏನೇ ಮಾಡಿದ್ರೂ ನಾವಿಬ್ಬರೂ ಒಟ್ಟಾಗೇ ಮಾಡುತ್ತೇವೆ ಅಂತಾರೆ ಕಾಂತ ಪ್ರಸಾದ್.

“I was 5 and Badami Ji was 3 when we got married in Azamgarh, UP. The only memory I have of the ceremony is of her hair…

Posted by Humans of Bombay on Monday, October 12, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...