alex Certify 81 ವರ್ಷಗಳ ಬಳಿಕ ಈ ಅಭಯಾರಣ್ಯದಲ್ಲಿ ಕಾಣಿಸಿಕೊಂಡ ಹುಲಿರಾಯ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

81 ವರ್ಷಗಳ ಬಳಿಕ ಈ ಅಭಯಾರಣ್ಯದಲ್ಲಿ ಕಾಣಿಸಿಕೊಂಡ ಹುಲಿರಾಯ…!

ಬೇರೆ ಬೇರೆ ಕಾರಣಗಳಿಂದ ತವರು ನಾಡಿನಿಂದಲೇ ವನ್ಯ ಪ್ರಾಣಿಗಳು ಕಣ್ಮರೆಯಾಗೋಕೆ ಶುರುವಾದರೆ ತುಂಬಾನೇ ಬೇಸರ ಎನಿಸುತ್ತೆ. ಇನ್ನೇನು ಈ ಪ್ರಾಣಿ ಕಣ್ಣಿಗೆ ಸಿಗೋದೇ ಇಲ್ಲ ಎಂದುಕೊಂಡಿದ್ದ ಸಂದರ್ಭದಲ್ಲೇ ಆ ಪ್ರಾಣಿ ನಮ್ಮ ಕಣ್ಣಿಗೆ ಬಿದ್ದರೆ ಅದೊಂದು ಪರಮಾನಂದವೇ ಸರಿ.

ಇಂತಹದ್ದೇ ಒಂದು ಘಟನೆ ಮಹಾರಾಷ್ಟ್ರ ಔರಂಗಾಬಾದ್​ ಜಿಲ್ಲೆಯ ಗೌತಲಾ ಆಟ್ರಮ್‌ಘಾಟ್ ಅಭಯಾರಣ್ಯದಲ್ಲಿ ಸಂಭವಿಸಿದೆ. ಈ ಅಭಯಾರಣ್ಯದಲ್ಲಿ ಬರೋಬ್ಬರಿ 81 ವರ್ಷದ ಬಳಿಕ ಹುಲಿ ಕಾಣಿಸಿಕೊಂಡಿದೆ. ಕೊನೆಯ ಬಾರಿಗೆ ಅಂದರೆ 1940ರಲ್ಲಿ ಇಲ್ಲಿ ಹುಲಿ ಕಾಣಿಸಿಕೊಂಡಿತ್ತು.

ಅಬ್ಬಬ್ಬಾ…! ಒಂದು ಗೊನೆ ಬಾಳೆಹಣ್ಣಿಗೆ ಒಂದೂವರೆ ಲಕ್ಷ ಪಾವತಿಸಿದ ಮಹಿಳೆ..!

ಇನ್ನು ಈ ವಿಚಾರವಾಗಿ ಮಾತನಾಡಿದ ಡಿವಿಶಿನಲ್​ ಅರಣ್ಯಾಧಿಕಾರಿ ವಿಜಯ್​ ಸತ್ಪುತೆ , ಯವತ್ಮಾಲ್​​ ತಿಪೇಶ್ವರ ಅಭಯಾರಣ್ಯದಿಂದ ಬಂದಿದೆ. ಅಂದರೆ ಈ ಹುಲಿ ತನ್ನ ಮೂಲ ಸ್ಥಾನದಿಂದ 330 ಕಿಲೋಮೀಟರ್​ ದೂರದಲ್ಲಿದೆ.

ಗಂಡು ಹುಲಿ ಮಾರ್ಚ್​ 11 – 12ರಂದೇ ಕಾಣಿಸಿಕೊಂಡಿದ್ದು ಮಾರ್ಚ್​ 15ರಂದು ಕ್ಯಾಮರಾ ಕಣ್ಣಿಗೆ ಬಿದ್ದಿದೆ. ತನ್ನ ಮೂಲಸ್ಥಾನದಿಂದ ಇಲ್ಲಿಗೆ ಬರಲು ಹುಲಿ ಯಾವ ಮಾರ್ಗ ಕಂಡುಕೊಂಡಿದೆ ಅನ್ನೋದು ಇನ್ನಷ್ಟೇ ದೃಢವಾಗಬೇಕಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...