alex Certify ದೆಹಲಿಯಲ್ಲಿ ಲಾಕ್​ಡೌನ್​ ಹಿನ್ನೆಲೆ ಮದ್ಯದಂಗಡಿಗಳ ಮುಂದೆ ಜನಜಾತ್ರೆ: ಕೋವಿಡ್​ ಲಸಿಕೆ ಬೇಡ ಸಾರಾಯಿ ಸಾಕು ಎಂದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೆಹಲಿಯಲ್ಲಿ ಲಾಕ್​ಡೌನ್​ ಹಿನ್ನೆಲೆ ಮದ್ಯದಂಗಡಿಗಳ ಮುಂದೆ ಜನಜಾತ್ರೆ: ಕೋವಿಡ್​ ಲಸಿಕೆ ಬೇಡ ಸಾರಾಯಿ ಸಾಕು ಎಂದ ಮಹಿಳೆ

ಕೊರೊನಾ ವೈರಸ್​​ ಕೇಸ್​ ಹೆಚ್ಚಳ ಕಾರಣಕ್ಕೆ ದೆಹಲಿಯಲ್ಲಿ ಆರು ದಿನಗಳ ಕಾಲ ಸಂಪೂರ್ಣ ಲಾಕ್​ಡೌನ್​ ಘೋಷಣೆ ಮಾಡಲಾಗಿದೆ. ಲಾಕ್​ಡೌನ್​ ಅವಧಿಯಲ್ಲಿ ತುರ್ತು ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ಮದ್ಯದಂಗಡಿಗಳೂ ಬಂದ್ ಇರಲಿವೆ. ಹೀಗಾಗಿ ಮದ್ಯದಂಗಡಿಗಳ ಎದುರು ದೀರ್ಘ ಸಾಲು ಕಂಡು ಬಂತು.

ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ವಿಡಿಯೋದಲ್ಲಿ ಶಿವಪುರದ ಗೀತಾ ಕಾಲೋನಿಯಲ್ಲಿ ಮದ್ಯ ಖರೀದಿ ಮಾಡಲು ಬಂದ ಮಹಿಳೆಯೊಬ್ಬರು ಮದ್ಯಗಳ ಬಗ್ಗೆ ಆಶ್ಚರ್ಯಕಾರಿ ಹೇಳಿಕೆಯನ್ನ ನೀಡಿದ್ದಾರೆ.

ನಾನಿಲ್ಲಿ ಎರಡು ಬಾಟಲಿ ಮದ್ಯ ಖರೀದಿ ಮಾಡಬೇಕೆಂದು ಬಂದಿದ್ದೇನೆ. ಮದ್ಯದ ಬಾಟಲಿಯಷ್ಟು ಯಾವುದೇ ಕೊರೊನಾ ಲಸಿಕೆಯ ಪರಿಣಾಮಕಾರತ್ವ ಹೊಂದಿಲ್ಲ. ನಾನು ಕಳೆದ 35 ವರ್ಷಗಳಿಂದ ಮದ್ಯ ಸೇವನೆ ಮಾಡುತ್ತಿದ್ದೇನೆ. ಇಲ್ಲಿಯವರೆಗೆ ನಾನು ಯಾವುದೇ ಔಷಧಿಗಳನ್ನ ಸೇವಿಸುತ್ತಿಲ್ಲ. ಮದ್ಯ ಸೇವನೆ ಮಾಡೋದ್ರಿಂದ ಕೊರೊನಾದಿಂದ ಸುರಕ್ಷಿತವಾಗಿ ಇರಬಹುದು ಎಂದು ಹೇಳಿದ್ದಾರೆ. ಈ ಮಹಿಳೆಯ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...