alex Certify ಮಾದಕ ವ್ಯಸನಿ ಮಕ್ಕಳಿಗೆ ಹೊಸ ಬದುಕು ಕೊಟ್ಟ ದಂಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾದಕ ವ್ಯಸನಿ ಮಕ್ಕಳಿಗೆ ಹೊಸ ಬದುಕು ಕೊಟ್ಟ ದಂಪತಿ

 

ರೈಲ್ವೇ/ಬಸ್/ಟ್ರಾಮ್ ನಿಲ್ದಾಣಗಳಲ್ಲಿ ಭಿಕ್ಷಾಟನೆ ಮಾಡಿಕೊಂಡು, ಚಿಲ್ಲರೆ ಕಾಸಿಗೆ ಸಿಕ್ಕ ಕೆಲಸ ಮಾಡಿಕೊಂಡು ಮಾದಕ ವ್ಯಸನಕ್ಕೆ ಅಂಟಿಕೊಂಡಿದ್ದ 50ಕ್ಕೂ ಹೆಚ್ಚು ಮಕ್ಕಳಿಗೆ ಹೊಸ ಬದುಕು ಕೊಟ್ಟ ವಾರಣಾಸಿಯ ದಂಪತಿ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ಆಶಿಶ್ ಸಿಂಗ್ ಹಾಗೂ ಅವರ ಪತ್ನಿ ಪೂಜಾ ಈ ಮಕ್ಕಳ ಬಾಳಿನಲ್ಲಿ ಹೊಸ ಬೆಳಕು ತಂದಿದ್ದಾರೆ. 2000ನೇ ಇಸವಿಯಲ್ಲಿ ಕಾನ್ಪುರ ವೈದ್ಯಕೀಯ ಕಾಲೇಜಿನಲ್ಲಿ ಪದವಿ ಪೂರೈಸಿದ ಆಶಿಶ್, ಕಾಶಿಯ ಬೀದಿ ಬೀದಿಗಳಲ್ಲಿ ಡ್ರಗ್ ವ್ಯಸನರಾದ ಮಕ್ಕಳನ್ನು ಪತ್ತೆ ಮಾಡಿ, ಅವರಿಗೆ ಪುನಃಶ್ಚೇತನದ ವ್ಯವಸ್ಥೆ ಮಾಡಿದ್ದಾರೆ.

ಆಶಿಶ್ ಹಾಗೂ ಪೂಜಾ ರೈಲ್ವೇ/ ಬಸ್ ನಿಲ್ದಾಣಗಳ ಬಳಿ ಸಿಗುವ ಮಾದಕ ವ್ಯಸನಿ ಮಕ್ಕಳನ್ನು ಪತ್ತೆ ಮಾಡಿ, ತಮ್ಮ ’ಕುಟುಂಬ್’ ಎನ್‌ಜಿಓ ಮೂಲಕ ಅವರಿಗೊಂದು ಹೊಸ ಬದುಕು ಕಟ್ಟಿಕೊಡಲು ಮಾನವೀಯ ಸೇವೆ ಮಾಡುತ್ತಾ ಬಂದಿದ್ದಾರೆ. 2002ರಿಂದಲೂ ಈ ದಂಪತಿಯ ಆದರ್ಶಮಯ ಸೇವೆ ನಡೆದುಕೊಂಡು ಬಂದಿದೆ.

ದಂಪತಿಗಳ ಈ ಸ್ಟೋರಿಯನ್ನು ’ಹ್ಯೂಮನ್ಸ್ ಆಫ್ ವಾರಣಾಸಿ’ ಪೇಜ್‌ನಲ್ಲಿ ಶೇರ್‌ ಮಾಡಲಾಗಿದೆ.

"We met while working in the social service sector (drug rehabilitation centres) in 2000. It was sad to see homeless…

Posted by Humans of Varanasi on Saturday, December 5, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...