alex Certify ಹೆತ್ತ ಮಕ್ಕಳಿಂದಲೇ ಬೀದಿಗೆ ಬಿದ್ದ ವೃದ್ದ…! ಜೀವನೋಪಾಯಕ್ಕಾಗಿ ಇಳಿವಯಸ್ಸಿನಲ್ಲೂ ಪೇಂಟಿಂಗ್‌ ಮಾರಾಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆತ್ತ ಮಕ್ಕಳಿಂದಲೇ ಬೀದಿಗೆ ಬಿದ್ದ ವೃದ್ದ…! ಜೀವನೋಪಾಯಕ್ಕಾಗಿ ಇಳಿವಯಸ್ಸಿನಲ್ಲೂ ಪೇಂಟಿಂಗ್‌ ಮಾರಾಟ

ಕೊರೊನಾದಿಂದಾಗಿ ಕಳೆದ ಒಂದೂವರೆ ವರ್ಷಗಳಿಂದ ಜನ ಸಾಮಾನ್ಯನ ಜೀವನ ಕೊಂಚ ಕಷ್ಟದಲ್ಲೇ ಸಾಗ್ತಿದೆ. ಲಾಕ್​ಡೌನ್​, ಆರ್ಥಿಕ ಸಂಕಷ್ಟದಿಂದಾಗಿ ಅನೇಕರು ತಮ್ಮ ಒಂದೊತ್ತಿನ ಊಟಕ್ಕೂ ಪರಿತಪಿಸುವ ಸ್ಥಿತಿ ಎದುರಾಗಿದೆ. ಇದೇ ಸಾಲಿಗೆ ಕಲಾವಿದ ಸುನಿಲ್​ ಪಾಲ್​ ಎಂಬವರು ಕೂಡ ಸೇರಿದ್ದು ಜೀವನ ಸಾಗಿಸಲಿಕ್ಕಾಗಿ ಇವರು ಬೀದಿಯಲ್ಲಿ ತಮ್ಮ ಪೇಂಟಿಂಗ್ಸ್​ನ್ನು ಮಾರುತ್ತಿದ್ದಾರೆ.

ಟ್ವಿಟರ್​ನಲ್ಲಿ ಶೇರ್​ ಮಾಡಲಾದ ಪೋಸ್ಟ್​​ನಲ್ಲಿ ಕೊಲ್ಕತ್ತಾದ ಈ ಕಲಾವಿದ ಜೀವನೋಪಾಯಕ್ಕಾಗಿ ಇಳಿವಯಸ್ಸಿನಲ್ಲೂ ಎಷ್ಟು ಕಷ್ಟ ಪಡ್ತಿದ್ದಾರೆ ಅನ್ನೋದನ್ನ ಬಣ್ಣಿಸಲಾಗಿದೆ. ಸ್ವಂತ ಮಕ್ಕಳೇ ಮನೆಯಿಂದ ಹೊರಹಾಕಿರೋದ್ರಿಂದ ವೃದ್ದಾಪ್ಯದಲ್ಲೂ ಜೀವನೋಪಾಯಕ್ಕೆ ಏನಾದರೂ ಮಾಡಲೇಬೇಕಾದ ಅನಿವಾರ್ಯತೆ ಸುನೀಲ್​ ಅವರಿಗಿತ್ತು.

ಹೀಗಾಗಿ ಕೊಲ್ಕತ್ತಾದ ವಿವಿಧ ಏರಿಯಾಗಳಲ್ಲಿ ಕೂತು ತಮ್ಮ ಪೇಂಟಿಂಗ್​ಗಳನ್ನ ಕೇವಲ 50 ಹಾಗೂ 100 ರೂಪಾಯಿಗಳಿಗೆ ಮಾರಾಟ ಮಾಡ್ತಾರೆ. ಕೋವಿಡ್​ನಿಂದಾಗಿ ವೃದ್ಧರಿಗೆ ಮನೆಯಲ್ಲೇ ಇರಬೇಕು ಎಂದು ತಜ್ಞರು ಸಲಹೆ ನೀಡಿದ್ದರೂ ಸಹ ಹಣಕ್ಕಾಗಿ ಬೀದಿ ಬೀದಿ ಅಲೆಯಲೇಬೇಕಾದ ಅನಿವಾರ್ಯತೆ ಸುನೀಲ್​ರಿಗಿದೆ. ಟ್ವಿಟರ್​ನಲ್ಲಿ ಸುನೀಲ್​ರ ಬಗೆಗಿನ ಪೋಸ್ಟ್​ಗಳು ವೈರಲ್​ ಆಗುತ್ತಿದ್ದಂತೆಯೇ ಅನೇಕರು ಕಲಾವಿದ ಸುನೀಲ್​ರ ಸಹಾಯಕ್ಕೆ ಧಾವಿಸಿದ್ದಾರೆ.

— Sajeda Akhtar (@Sajeda_Akhtar) May 24, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...