alex Certify ಊಟ ಮಾಡುವಾಗಲೂ ಸ್ಮಾರ್ಟ್‌ ಫೋನ್‌ ಬಿಡಲಾರದವರಿಗೆ ಬಂತೊಂದು ತಟ್ಟೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಊಟ ಮಾಡುವಾಗಲೂ ಸ್ಮಾರ್ಟ್‌ ಫೋನ್‌ ಬಿಡಲಾರದವರಿಗೆ ಬಂತೊಂದು ತಟ್ಟೆ….!

ಬದಲಾಗುತ್ತಿರುವ ಕಾಲಘಟ್ಟಕ್ಕೆ ತಕ್ಕಂತೆ ಬದಲಾಗುವ ಸವಾಲುಗಳಿಗೆ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿಯೂ ನಾವು ಸಿದ್ಧಹಸ್ತರು. ಸ್ಮಾರ್ಟ್‌ಫೋ‌ನ್‌ಗಳು ನಮ್ಮ ಜೀವನಗಳ ಅವಿಭಾಜ್ಯ ಅಂಗವಾಗಿಬಿಟ್ಟಿವೆ.

ನಮ್ಮ ದೇಹಗಳ ಪರ್ಯಾಯ ಅಂಗದಂತೆಯೇ ಆಗಿಬಿಟ್ಟಿರುವ ಈ ಸ್ಮಾರ್ಟ್ ‌‌ಫೋನ್ ‌ಗಳನ್ನು ಕೈಯಲ್ಲಿ ಹಿಡಿದಿಟ್ಟುಕೊಂಡು ಸಾಮಾಜಿಕ ಜಾಲತಾಣಗಳ ನ್ಯೂಸ್ ‌ಫೀಡ್‌ ಅನ್ನು ಬ್ರೌಸ್ ಮಾಡದೇ 5-10 ನಿಮಿಷಗಳ ಕಾಲ ಇರಲು ಸಾಧ್ಯವೇ ಇಲ್ಲ ಎನ್ನುವಂತಾಗಿಬಿಟ್ಟಿದೆ ಲೈಫ್. ಬಹಳಷ್ಟು ಮಂದಿಗೆ ಉಟ ಮಾಡುವಾಗಲಂತೂ ಈ ಫೋನ್‌ಗಳು ಬೇಕೇಬೇಕು.

ಇದಕ್ಕೆಂದೇ ರೆಸ್ಟೋರೆಂಟ್ ಒಂದು ತನ್ನ ಥಾಲಿಯ ತಟ್ಟೆಯಲ್ಲಿ ಸ್ಮಾರ್ಟ್‌ ‌ಫೋನ್‌ ಗೆಂದೇ ಪ್ರತ್ಯೇಕ ವಿಭಾಗವೊಂದನ್ನು ಇಟ್ಟಿದೆ. ಅನ್ನ, ಸಾರು, ಪಲ್ಯಗಳು, ಮೊಸರು ಹಾಗೂ ಸಿಹಿ ತಿನಿಸುಗಳಿಗೆ ಪ್ರತ್ಯೇಕ ವಿಭಾಗಗಳು ಇರುವಂತೆಯೇ ಈ ಸ್ಮಾರ್ಟ್ ‌ಫೋನ್ ‌ಗೂ ಸಹ ತಟ್ಟೆಯಲ್ಲಿ ಪ್ರತ್ಯೇಕ ಜಾಗವಿದೆ. ಇಂಥ ಆವಿಷ್ಕಾರೀ ತಟ್ಟೆಯ ಚಿತ್ರವೊಂದನ್ನು ಭಾರತ ಕ್ರಿಕೆಟ್ ತಂಡ ಆಫ್ ‌ಸ್ಪಿನ್ನರ್‌ ಹರ್ಭಜನ್ ಸಿಂಗ್ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

— Harbhajan Turbanator (@harbhajan_singh) September 10, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...