alex Certify ಮನೆಯಲ್ಲಿ ಹಳೆ ಸ್ಮಾರ್ಟ್ ಫೋನ್​ ಇದ್ದರೆ ಹೀಗೆ ಮಾಡಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲಿ ಹಳೆ ಸ್ಮಾರ್ಟ್ ಫೋನ್​ ಇದ್ದರೆ ಹೀಗೆ ಮಾಡಿ…!

ಮನೆಯಲ್ಲಿ ಬಳಕೆ ಮಾಡದೇ ಬಿಟ್ಟಿರುವ ಹಳೆಯ ಸ್ಮಾರ್ಟ್ ಫೋನ್​ಗಳು ಸಾಕಷ್ಟು ಇರುತ್ವೆ . ಆದರೆ ಈ ಹಳೆಯ ಫೋನ್​ಗಳು ಅದೆಷ್ಟೋ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಸಹಾಯ ಮಾಡಬಲ್ಲುದು.

ಕೊರೊನಾ ವೈರಸ್​ನಿಂದಾಗಿ ಆನ್​ಲೈನ್​ ಶಿಕ್ಷಣ ವ್ಯವಸ್ಥೆಗೆ ಹೆಚ್ಚು ಒತ್ತು ಸಿಕ್ಕಿರೋದ್ರಿಂದ ಬಡ ವಿದ್ಯಾರ್ಥಿಗಳಿಗೆ ಕಷ್ಟವಾಗಿದೆ. ಹೀಗಾಗಿ ಉತ್ತರಾಖಂಡ್​ನ ವ್ಯಕ್ತಿಯೊಬ್ಬರು ಬಡ ವಿದ್ಯಾರ್ಥಿನಿಯರಿಗಾಗಿ ಹಳೆಯ ಸ್ಮಾರ್ಟ್ ಫೋನ್​ ಸಂಗ್ರಹ ಮಾಡೋಕೆ ಮುಂದಾಗಿದ್ದಾರೆ.

ಉತ್ತರಾಖಂಡ್ನನ ಹಲ್ದ್ವಾನಿ ನಿವಾಸಿಯಾಗಿರುವ 27 ವರ್ಷದ ಶುಭಂ ಧರ್ಮಸ್ಕ್ತು ವಿದ್ಯಾರ್ಥಿನಿಯರ ಆನ್​​ಲೈನ್​ ಶಿಕ್ಷಣಕ್ಕೆ ನೆರವಾಗುತ್ತಿದ್ದಾರೆ. ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲರಾಗಿರುವ ಶುಭಂ ತಾಯಿ ಬಡ ವಿದ್ಯಾರ್ಥಿನಿಯರಿಗೆ ಮೊಬೈಲ್​ ಖರೀದಿ ಮಾಡಲು ಕಷ್ಟವಾಗುತ್ತಿದೆ ಅಂತಾ ಹೇಳಿಕೊಂಡಿದ್ದರು.

ಕೆಲ ವಿದ್ಯಾರ್ಥಿನಿಯರಂತೂ ಮೊಬೈಲ್​ ಖರೀದಿ ಮಾಡಲೂ ಆಗದೇ……ಇತ್ತ ಶಿಕ್ಷಣ ಪಡೆಯಲೂ ಬೇರೆ ದಾರಿಯೂ ಸಿಗದೇ ಆತ್ಮಹತ್ಯೆಗೆ ಶರಣಾಗಿದ್ದರು.

ಇದನ್ನೆಲ್ಲ ನೋಡಿದ ಶುಭಂ ತನ್ನ ಮನೆಯ ಸಮೀಪದ ವಿದ್ಯಾರ್ಥಿನಿಗೆ ಹಳೆಯ ಫೋನ್​ ನೀಡಿದ್ದಾರೆ. ಇದೀಗ ಆ ವಿದ್ಯಾರ್ಥಿನಿ ಆ ಹಳೆಯ ಫೋನ್​​ನ್ನೇ ಬಳಸಿ ಆನ್​ಲೈನ್​ ಶಿಕ್ಷಣ ಪಡೆಯುತ್ತಿದ್ದಾರೆ. ಹೀಗಾಗಿ ಶುಭಂ ಹಳೆಯ ಫೋನ್​ಗಳನ್ನ ಸಂಗ್ರಹಿಸಿ ಮಕ್ಕಳಿಗೆ ನೀಡುವ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕದಲ್ಲೂ ಹಲವರು ಈ ಕಾರ್ಯದಲ್ಲಿ ತೊಡಗಿರುವುದರ ಕುರಿತಂತೆ ಈ ಹಿಂದೆ ವರದಿಯಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...