alex Certify ಬಾಯಾರಿದ ಗಿಳಿ ಎಳನೀರು ಕುಡಿಯುವ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಯಾರಿದ ಗಿಳಿ ಎಳನೀರು ಕುಡಿಯುವ ವಿಡಿಯೋ ವೈರಲ್

ಬಾಯಾರಿದ ಗಿಳಿಯೊಂದು ತೆಂಗಿನ ಮರದಲ್ಲಿ ಎಳನೀರನ್ನು ಕುಡಿಯುವ ಸುಂದರವಾದ ವಿಡಿಯೋ ನೆಟ್ಟಿಗರ ಮನಸೂರೆಗೊಂಡಿದೆ.

ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಸಾಂತ ನಂದಾ ವಿಡಿಯೋ ಪೋಸ್ಟ್ ಮಾಡಿದ್ದು, ಅದರಲ್ಲಿರುವಂತೆ ಮುದ್ದಾದ ಗಿಳಿ ತನ್ನ ಕೊಕ್ಕಿನಿಂದ ತೆಂಗಿನಕಾಯಿಯನ್ನು ಕುಕ್ಕಿ ಎಳನೀರು ಕುಡಿದು ಬಾಯಾರಿಕೆ ನೀಗಿಸಿಕೊಳ್ಳುತ್ತದೆ.

ಎಳನೀರು ಕುಡಿಯುವುದನ್ನು ಯಾರು ಇಷ್ಟಪಡುವುದಿಲ್ಲ ಹೇಳಿ ಎಂದು ಸುಸಾಂತ ನಂದ ಅವರು ಶೀರ್ಷಿಕೆ ನೀಡಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಈ ವಿಡಿಯೋಗೆ ಸಾವಿರಾರು ನೆಟ್ಟಿಗರು ಪ್ರತಿಕ್ರಿಯೆಗಳನ್ನು ನೀಡಿ ಮೆಚ್ಚುಗೆ ಸೂಚಿಸಿದ್ದಾರೆ. ಎಳನೀರಿನ ಉಪಯೋಗದ ಬಗ್ಗೆಯೂ ಅಭಿಪ್ರಾಯಗಳನ್ನು ನೀಡಿದ್ದಾರೆ.

ತೆಂಗಿನಕಾಯನ್ನು ಕುಕ್ಕಿ ಎಳನೀರು ಕುಡಿಯುವ ಗಿಳಿಯ ಸಾಹಸವನ್ನು ಸಹ ಮೆಚ್ಚಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...