alex Certify ವಲಸೆ ಕಾರ್ಮಿಕರ ಸಂಕಷ್ಟ ಹೇಳುತ್ತಿದೆ ಈ ಮೂರ್ತಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಲಸೆ ಕಾರ್ಮಿಕರ ಸಂಕಷ್ಟ ಹೇಳುತ್ತಿದೆ ಈ ಮೂರ್ತಿ..!

ವಿಶ್ವಕ್ಕೆ ಬಂದಪ್ಪಳಿಸಿರೋ ಕರೊನಾ ಅದೆಷ್ಟೋ ವಲಸೆ ಕಾರ್ಮಿಕರ ತುತ್ತಿನ ಊಟಕ್ಕೂ ಬರೆ ಎಳೆದಿದೆ. ಅದೆಷ್ಟೋ ಮಂದಿ ವಲಸೆ ಕಾರ್ಮಿಕರು ಇತ್ತ ಕೆಲಸವೂ ಸಿಗದೇ ಅತ್ತ ಹುಟ್ಟೂರಲ್ಲಿ ನೆಲೆಯೂ ಇಲ್ಲದೇ ಸಂಕಷ್ಟದಲ್ಲಿದ್ದಾರೆ. ಇಂತಹ ಕಾರ್ಮಿಕರ ವಿಗ್ರಹವನ್ನೇ ಈ ಬಾರಿ ದುರ್ಗಾ ಪೂಜೆಯಲ್ಲಿ ಆರಾಧಿಸೋಕೆ ಕೊಲ್ಕತ್ತಾ ಮಂದಿ ನಿರ್ಧರಿಸಿದ್ದಾರೆ.

ಕೊಲ್ಕತ್ತಾದ ಬೆಹಾಲಾ ಪ್ರದೇಶ ಬರಿಷಾ ಕ್ಲಬ್​ ಈ ರೀತಿಯ ವಿನೂತನ ಯೋಚನೆಯೊಂದನ್ನ ಮಾಡಿದೆ. ಈ ಬಾರಿಯ ದುರ್ಗಾ ಉತ್ಸವದಲ್ಲಿ ಪರಿಹಾರ ಎಂಬ ತತ್ವವನ್ನ ಇಟ್ಟುಕ್ಕೊಂಡು ವಿಗ್ರಹ ಸ್ಥಾಪನೆಗೆ ಮುಂದಾಗಿದ್ದಾರೆ. ಸೀರೆ ಉಟ್ಟ ತಾಯಿಯೊಬ್ಬಳು ಅಂಗಿಯೇ ಇರದ ಕಂದಮ್ಮನನ್ನ ಎತ್ತುಕ್ಕೊಂಡಿರೋ ವಿಗ್ರಹ ನಿರ್ಮಿಸಲಾಗಿದ್ದು ಈ ಮೂಲಕ ವಲಸೆ ಕಾರ್ಮಿಕರ ನೋವನ್ನ ದೇಶಕ್ಕೇ ತೋರಿಸಲು ಮುಂದಾಗಿದ್ದಾರೆ.

ಶರ್ಟ್​ ಹಾಕದ ಪುಟ್ಟ ಕಂದಮ್ಮನನ್ನ ಎತ್ತಿಕ್ಕೊಂಡಿರೋ ಮಹಿಳೆಯ ಪಕ್ಕದಲ್ಲೇ ಇಬ್ಬರು ಹೆಣ್ಣು ಮಕ್ಕಳ ಮೂರ್ತಿಯಿದೆ. ಇದರಲ್ಲಿ ಗೂಬೆಯನ್ನ ಹಿಡಿದುಕೊಂಡ ಹೆಣ್ಣು ಮಗಳು ಲಕ್ಷ್ಮೀ. ಮತ್ತು ಇನ್ನೊಂದು ಹೆಣ್ಣು ಮಗು ಬಾತುಕೋಳಿಯನ್ನ ಹಿಡಿದುಕೊಂಡಿದ್ದಾಳೆ. ಮತ್ತೊಂದು ವಿಗ್ರಹ ಆನೆಯ ತಲೆಯನ್ನ ಹೊಂದಿದ್ದು ಅದನ್ನ ಗಣಪತಿ ಎಂದು ವ್ಯಾಖ್ಯಾನಿಸಲಾಗಿದೆ.

ಇವರೆಲ್ಲ ಪರಿಹಾರಕ್ಕಾಗಿ ದುರ್ಗಾ ಮಾತೆಯ ಬಳಿ ಸಾಗುತ್ತಿರುವ ರೀತಿಯಲ್ಲಿ ವಿಗ್ರಹ ರಚಿಸಲಾಗುತ್ತೆ. ಇತ್ತ ದುರ್ಗಾ ಮಾತೆ ಈ ಬಾರಿ ಯಾವುದೇ ಶಸ್ತ್ರಾಸ್ತ್ರವನ್ನ ಹೊಂದಿರುವುದಿಲ್ಲ. ಆದರೆ ಆಕೆಯ ಬಳಿ ಇರುವ ರಾಕ್ಷಸ ಹಸಿವಿನಿಂದಿರುತ್ತಾನೆ. ದುರ್ಗಾ ಮಾತೆಯ ಕಣ್ಣು ದಯೆಯಿಂದ ನೋಡುತ್ತಿರುವ ರೀತಿಯಲ್ಲಿ ಮೂರ್ತಿಯನ್ನ ನಿರ್ಮಿಸಲಾಗುತ್ತೆ.

ಇನ್ನು ಈ ವಿಗ್ರಹಗಳನ್ನ ನಿರ್ಮಿಸ್ತಾ ಇರೋ ದಾಸ್​ ಈ ಬಗ್ಗೆ ಮಾತನಾಡಿ ಲಾಕ್​ಡೌನ್​ ಸಮಯದಲ್ಲಿ ವಲಸೆ ಕಾರ್ಮಿಕರ ಸಂಕಷ್ಟದ ಕುರಿತಾದ ಸ್ಟೋರಿಗಳನ್ನ ನೋಡ್ತಾ ಇಂತಹದ್ದೊಂದು ಮೂರ್ತಿ ನಿರ್ಮಿಸೋ ಪ್ರೇರಣೆ ದೊರಕಿತು. ಅಲ್ಲದೇ ದೆಹಲಿ ಹಾಗೂ ಉತ್ತರ ಭಾರತದ ಇತರೆ ಭಾಗಗಳಿಗೆ ಪ್ರಯಾಣ ಮಾಡಿದ್ದ ನನ್ನ ಸ್ನೇಹಿತರು ಹೇಳಿದ ಕೆಲ ಘಟನೆಗಳನ್ನ ಕಲ್ಪಿಸಿಕೊಂಡು ಇಂತಹದ್ದೊಂದು ಕಲಾಕೃತಿ ನಿರ್ಮಿಸುತ್ತಿದ್ದೇನೆ ಅಂತಾ ಹೇಳಿದ್ರು. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಈ ವಿಗ್ರಹಗಳನ್ನ ಉದ್ಘಾಟಿಸಲಿದ್ದಾರೆ ,

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...