alex Certify ನಟ ರಾಜೀವ್​ ಕಪೂರ್​ ಅಂತ್ಯಕ್ರಿಯೆ ವೇಳೆ ನಡೀತು ಅಚ್ಚರಿಯ ಘಟನೆ..! ಫೋಟೋ ಕಂಡು ಭಾವುಕರಾದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟ ರಾಜೀವ್​ ಕಪೂರ್​ ಅಂತ್ಯಕ್ರಿಯೆ ವೇಳೆ ನಡೀತು ಅಚ್ಚರಿಯ ಘಟನೆ..! ಫೋಟೋ ಕಂಡು ಭಾವುಕರಾದ ನೆಟ್ಟಿಗರು

ಬಾಲಿವುಡ್​ ದಂತಕತೆ ರಾಜ್​ ಕಪೂರ್​ ಪುತ್ರ ರಾಜೀವ್​ ಕಪೂರ್ ಮಂಗಳವಾರ ನಿಧನರಾಗಿದ್ದರು. 58 ವರ್ಷದ ರಾಜೀವ್​ ಕಪೂರ್​ ಅಂತ್ಯಕ್ರಿಯೆಯನ್ನ ಕುಟುಂಬಸ್ಥರು ಹಾಗೂ ಆತ್ಮೀಯರ ಉಪಸ್ಥಿತಿಯಲ್ಲಿ ನಡೆಸಲಾಗಿದೆ.

ರಾಜೀವ್​ ಕಪೂರ್​​ರ ಐವರು ಮಕ್ಕಳಲ್ಲಿ ರಾಜೀವ್​ ಕಪೂರ್ ಕಿರಿಯರು. ರಣಧೀರ್​ ಕಪೂರ್, ರಿಷಿ ಕಪೂರ್​, ರೀತು ನಂದಾ ಹಾಗೂ ರೀಮಾ ಜೈನ್​​ ರಾಜ್​ಕಪೂರ್​ರ ಇತರೆ ನಾಲ್ವರು ಮಕ್ಕಳು. ಸೋಶಿಯಲ್​ ಮೀಡಿಯಾದಲ್ಲಿ ರಾಜೀವ್​ ಕಪೂರ್​ ನಿಧನಕ್ಕೆ ಸಂತಾಪ ಸೂಚಿಸಿ ಪೋಸ್ಟ್​​ಗಳನ್ನ ಹಾಕಿದ್ದು ಒಂದೆಡೆಯಾದ್ರೆ 94 ವರ್ಷದ ವೃದ್ಧರೊಬ್ಬರು ರಾಜೀವ್​ ಕಪೂರ್​ ಅಂತಿಮ ದರ್ಶನಕ್ಕೆ ಆಗಮಿಸಿದ ಫೋಟೋಗಳು ಕೂಡ ಭಾರೀ ಸದ್ದು ಮಾಡ್ತಿವೆ.

ಈ ವೃದ್ಧನ ಹೆಸರು ವಿಶ್ವ ಮೆಹ್ರಾ ಎಂದಾಗಿದ್ದು ಇವರು ಒಂದು ಕಾಲದಲ್ಲಿ ಆರ್​ಕೆ ಸ್ಟುಡಿಯೋದಲ್ಲಿ ಮ್ಯಾನೇಜರ್​ ಆಗಿ ಕಾರ್ಯ ನಿರ್ವಹಿಸಿದ್ದರಂತೆ. ಇದನ್ನ ಬಿಟ್ಟು ಕಪೂರ್​ ಕುಟುಂಬಸ್ಥರ ಜೊತೆ ಈ ವೃದ್ಧನಿಗೆ ಯಾವುದೇ ಸಂಬಂಧ ಇಲ್ಲ. ಸರಿಯಾಗಿ ನಡೆಯಲು ಆಗದೇ ಇದ್ದರೂ ಕೂಡ ರಾಜೀವ್​ ಕಪೂರ್​​ರ ಅಂತಿಮ ದರ್ಶನ ಪಡೆಯಲು ಕಪೂರ್​ ನಿವಾಸಕ್ಕೆ ವಿಶ್ವ ಮೆಹ್ರಾ ಆಗಮಿಸಿದ್ದರು. ಗೇಟ್​ ಬಳಿ ನಿಂತು ಅಳುತ್ತಾ ಕಣ್ಣೀರು ಒರೆಸಿಕೊಳ್ತಿದ್ದ ಈ ವೃದ್ಧನ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

ದಿವಂಗತ ರಿಷಿ ಕಪೂರ್​ ಪತ್ನಿ ನೀತು ಸಿಂಗ್,​ ರಾಜೀವ್​ ಕಪೂರ್​​ರ ನಿಧನ ವಾರ್ತೆಯನ್ನ ಮೊದಲು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇಲ್ಲಿಯವರೆಗೂ ರಾಜೀವ್​ ಕಪೂರ್​​ರ ನಿಧನಕ್ಕೆ ಕಾರಣವನ್ನ ಕಪೂರ್​ ಕುಟುಂಬ ಬಹಿರಂಗಪಡಿಸಿಲ್ಲ. 1983ರಲ್ಲಿ ಎಕ್​ ಜಾನ್​ ಹೈ ಹಮ್​ ಎಂಬ ಸಿನಿಮಾ ಮೂಲಕ ರಾಜೀವ್​ ಕಪೂರ್​ ಬಾಲಿವುಡ್​ಗೆ ಪಾದಾರ್ಪಣೆ ಮಾಡಿದ್ದರು. 1985ರಲ್ಲಿ ತೆರೆ ಕಂಡ ತೇರಿ ಗಂಗಾ ಮೈಲಿ ಎಂಬ ಸಿನಿಮಾ ರಾಜೀವ್​ ಕಪೂರ್​ಗೆ ಹೆಸರು ತಂದುಕೊಟ್ಟ ಸಿನಿಮಾ. ಇದಾದ ಬಳಿಕ ಆಕಾಶ್​, ಲವರ್​ ಬಾಯ್​, ಜಬರ್​ದಸ್ತ್​ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿದ ರಾಜೀವ್​ ಕಪೂರ್​ ಬಳಿಕ ಚಿತ್ರ ನಿರ್ಮಾಣದತ್ತ ವಾಲಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...