ಪರಿಶುದ್ಧವಾದ ಸ್ನೇಹ ಎಂಬ ಪರಿಕಲ್ಪನೆ ಕೇವಲ ಮಾನವರಲ್ಲಿ ಮಾತ್ರವಲ್ಲ, ಪ್ರಾಣಿಗಳಲ್ಲೂ ಸಹ ಬಹಳಷ್ಟಿದೆ. ಮಾನವರಿಗಿಂತ ತುಸು ದೊಡ್ಡ ಮಟ್ಟದಲ್ಲೇ ಪ್ರಾಣಿಗಳ ನಡುವಿನ ಸ್ನೇಹದ ಉತ್ಕಟತೆ ಇರುತ್ತದೆ.
ಸಿಂಹದ ಬಾಯಿಗೆ ಸಿಲುಕಿದ್ದ ತನ್ನ ಮಿತ್ರನ ನೆರವಿಗೆ ನಿಂತ ಝೀಬ್ರಾವೊಂದರ ಧೈರ್ಯದ ಗಾಥೆಯ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ. ತನ್ನ ಮಿತ್ರನನ್ನು ಬೇಟೆಯಾಡಲು ಮುಂದಾದ ಸಿಂಹಿಣಿಯೊಂದಕ್ಕೆ ತನ್ನ ಬಲಿಷ್ಠವಾದ ಕಾಲುಗಳಿಂದ ಒದ್ದು ಓಡಿಸಿದ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಈ ವಿಡಿಯೋವನ್ನು ಶೇರ್ ಮಾಡಿಕೊಂಡಿರುವ ರಾಜ್‌ಶೇಖರ್ ಹೆಸರಿನ ಬಳಕೆದಾರರು, “ನಿಮ್ಮ ಬದುಕಿನ ಸಂಕಷ್ಟದಲ್ಲಿ ಒಬ್ಬನಾದರೂ ಮಿತ್ರ ಇರಬೇಕು. ಆತ ನಿಮ್ಮೊಂದಿಗೆ ನಿಂತು, ನಾನಿದ್ದೇನೆ, ತಲೆ ಕೆಡಿಸಿಕೊಳ್ಳಬೇಡ’ ಎನ್ನಬೇಕು” ಎಂದು ಪೋಸ್ಟ್‌ಗೆ ಕ್ಯಾಪ್ಷನ್ ಹಾಕಿದ್ದಾರೆ.