alex Certify ಲಾಲೂ ಪುತ್ರನನ್ನು ಹೊಗಳಿ ಅಚ್ಚರಿ ಮೂಡಿಸಿದ ಉಮಾ ಭಾರತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಲೂ ಪುತ್ರನನ್ನು ಹೊಗಳಿ ಅಚ್ಚರಿ ಮೂಡಿಸಿದ ಉಮಾ ಭಾರತಿ

ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ಮಾತನಾಡಿದ ಬಿಜೆಪಿ ನಾಯಕಿ ಉಮಾ ಭಾರತಿ, ಆರ್​ಜೆಡಿ ಮುಖಂಡ ತೇಜಸ್ವಿ ಯಾದವ್​ ಗುಡ್​ ಬಾಯ್​ ಅಂತಾ ಹೇಳಿದ್ದಾರೆ.

ಬಿಹಾರ ಚುನಾವಣೆಯ ಫಲಿತಾಂಶವನ್ನ ಸ್ವಾಗತಿಸಿ ಭೂಪಾಲ್​ನಲ್ಲಿ ಮಾತನಾಡಿದ ಉಮಾ ಭಾರತಿ, ತೇಜಸ್ವಿ ತುಂಬಾ ಒಳ್ಳೆಯ ಹುಡುಗ, ಆದರೆ ಆತನಿಗೆ ಬಿಹಾರವನ್ನ ನಡೆಸಿಕೊಂಡು ಹೋಗುವಷ್ಟು ಅನುಭವವಿಲ್ಲ ಎಂದು ಹೇಳಿದ್ದಾರೆ.

ಒಂದು ವೇಳೆ ತೇಜಸ್ವಿ ಯಾದವ್​ ಬಿಹಾರದ ಅಧಿಕಾರದ ಚುಕ್ಕಾಣಿ ಹಿಡಿಯಲು ಯಶಸ್ವಿಯಾಗುತ್ತಿದ್ದರೆ ಆತನ ತಂದೆ ಲಾಲು ಪ್ರಸಾದ್​ ಯಾದವ್​ ಬಿಹಾರದಲ್ಲಿ ಹಿಂಬಾಗಿಲಿನ ರಾಜಕಾರಣ ನಡೆಸುತ್ತಿದ್ದರು ಅಂತಾ ಅಭಿಪ್ರಾಯ ಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...