alex Certify ಶಶಿ ತರೂರ್ ಗೆ ಇಂಗ್ಲೀಷ್​ ಪಾಠ ಮಾಡಿದ 10ನೇ ತರಗತಿ ವಿದ್ಯಾರ್ಥಿನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಶಿ ತರೂರ್ ಗೆ ಇಂಗ್ಲೀಷ್​ ಪಾಠ ಮಾಡಿದ 10ನೇ ತರಗತಿ ವಿದ್ಯಾರ್ಥಿನಿ

ಕಾಂಗ್ರೆಸ್​ ಸಂಸದ ಶಶಿ ತರೂರ್​​ರ ಇಂಗ್ಲೀಷ್​ ಜ್ಞಾನವನ್ನ ಪ್ರಶ್ನೆ ಮಾಡುವ ಹಾಗೇ ಇಲ್ಲ. ಸುಲಲಿತವಾಗಿ ಇಂಗ್ಲೀಷ್​ನಲ್ಲಿ ಮಾತನಾಡಬಲ್ಲ ಸಾಮರ್ಥ್ಯ ತರೂರ್​ಗೆ ಇದೆ.

ಆದರೆ ಕ್ಲಬ್​ ಎಫ್​ಎಂನಲ್ಲಿ ಆರ್​ಜೆ ರಫಿ ಜೊತೆ ಕಾಣಿಸಿಕೊಂಡ ಶಶಿ ತರೂರ್​ಗೆ 10ನೇ ತರಗತಿಯ ದಿಯಾ ಎಂಬ ವಿದ್ಯಾರ್ಥಿನಿ ಇಂಗ್ಲಿಷ್​ನಲ್ಲಿ ಈವರೆಗೆ ಶಶಿ ತರೂರ್​ ಕೇಳದ ಶಬ್ದಗಳನ್ನ ಉಚ್ಚರಿಸುವ ಮೂಲಕ ಶಶಿ ತರೂರ್​ರನ್ನ ಆಶ್ಚರ್ಯಕ್ಕೊಳಗಾಗುವಂತೆ ಮಾಡಿದ್ದಾರೆ.

ಝೂಮ್​ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿನಿ ತನ್ನ ಟ್ಯಾಲೆಂಟ್​ನ್ನ ಪ್ರದರ್ಶಿಸಿದ್ದಾರೆ. ಶೋನಲ್ಲಿ ದಿಯಾ ಕೆಲ ಟಂಗ್​ ಟ್ವಿಸ್ಟರ್​ಗಳನ್ನ ಒಂದು ಚೂರು ತೊದಲದೇ ಹೇಳಿದ್ದಾರೆ. ಶಶಿ ತರೂರ್​ ದಿಯಾ ಬಳಿ ಆಕೆ ಉಚ್ಚರಿಸಿದ ಶಬ್ದಗಳ ಅರ್ಥವನ್ನ ಕೇಳಿದ್ದಾರೆ.

ಇದಕ್ಕೆ ದಿಯಾ ಇದೊಂದು ಕಾಲ್ಪನಿಕ ಆಹಾರದ ಹೆಸರು ಅಂತಾ ಹೇಳಿದ್ದಾರೆ. ಈ ವಿಡಿಯೋವನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿರುವ ಶಶಿ ತರೂರ್​, ನಾನು ಈವರೆಗೆ ಇಂಗ್ಲಿಷ್​ನಲ್ಲಿ ಕೇಳದ ಶಬ್ದಗಳನ್ನ ಬಳಸಿ ದಿಯಾ ಟಂಗ್​ ಟ್ವಿಸ್ಟರ್​ ಮಾಡಿದ್ದಾರೆ ಅಂತಾ ಬರೆದುಕೊಂಡಿದ್ದಾರೆ.

— Shashi Tharoor (@ShashiTharoor) November 5, 2020

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...