alex Certify ಪತ್ನಿಯ ಸಹೋದರಿಯೊಂದಿಗೆ ಆಟೋ ಚಾಲಕನ ಸರಸ, ಮಹಿಳೆ ಪತಿಯಿಂದ ಘೋರ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿಯ ಸಹೋದರಿಯೊಂದಿಗೆ ಆಟೋ ಚಾಲಕನ ಸರಸ, ಮಹಿಳೆ ಪತಿಯಿಂದ ಘೋರ ಕೃತ್ಯ

ತೂತುಕುಡಿ: ತಮಿಳುನಾಡಿನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ 27 ವರ್ಷದ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಥಳಿಸಿ ಹತ್ಯೆ ಮಾಡಲಾಗಿದೆ.

ಆಟೋ ಚಾಲಕ ಪ್ರೇಮ್ ಕುಮಾರ್ ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ. ಪ್ರೇಮ್ ಕುಮಾರ್ ಪತ್ನಿಯ ಸಹೋದರಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದೆ ಕೊಲೆಗೆ ಕಾರಣವೆನ್ನಲಾಗಿದೆ. ಆರೋಪಿ ವಿಘ್ನೇಶ್ವರನ್ ತನ್ನ ಸಹೋದರರು ಮತ್ತು ಸಹಚರರೊಂದಿಗೆ ಸೇರಿ ಕೊಲೆ ಮಾಡಿದ್ದಾನೆ.

ಪ್ರೇಮ್ ಕುಮಾರ್ ಮತ್ತು ವಿಘ್ನೇಶ್ವರನ್ ಅಕ್ಕ – ತಂಗಿಯನ್ನು ಮದುವೆಯಾಗಿದ್ದರು. ಈ ನಡುವೆ ಪ್ರೇಮ್ ಕುಮಾರ್ ಪತ್ನಿಯ ಸಹೋದರಿಯಾಗಿರುವ ವಿಘ್ನೇಶ್ವರನ್ ಪತ್ನಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಾನೆ. ಮಂಗಳವಾರ ರಾತ್ರಿ ಟ್ಯೂಟಿಕೋರಿನ್ ಜಿಲ್ಲೆಯ ಕೆಟಿಸಿ ನಗರದಲ್ಲಿ ಇಬ್ಬರ ನಡುವೆ ಗಲಾಟೆಯಾಗಿದೆ.

ಈ ವೇಳೆ ವಿಘ್ನೇಶ್ವರನ್ ಮತ್ತು ಆತನ ಸಹಚರರು ಪ್ರೇಮ್ ಕುಮಾರ್ ನನ್ನು ಮಾರಕಾಸ್ತ್ರಗಳಿಂದ ಥಳಿಸಿ ಕೊಲೆ ಮಾಡಿದ್ದಾರೆ. ತೂತುಕುಡಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಕಳುಹಿಸಲಾಗಿದೆ. ತೀವ್ರ ರಕ್ತಸ್ರಾವದಿಂದ ಪ್ರೇಮಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದು ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಟುಟಿಕೊರಿನ್ ಪೊಲೀಸ್ ಅಧೀಕ್ಷಕ ಎಸ್. ಜಯಕುಮಾರ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...