alex Certify ಅವಿವಾಹಿತನೊಂದಿಗೆ ಸಂಬಂಧ ಬೆಳೆಸಿದ ಗೃಹಿಣಿ, ಕುಟುಂಬದವರಿಂದಲೇ ಘೋರ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅವಿವಾಹಿತನೊಂದಿಗೆ ಸಂಬಂಧ ಬೆಳೆಸಿದ ಗೃಹಿಣಿ, ಕುಟುಂಬದವರಿಂದಲೇ ಘೋರ ಕೃತ್ಯ

ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ ಘಟನೆ ತಮಿಳುನಾಡಿನ ಮಧುರೈ ಜಿಲ್ಲೆಯ ಮೇಲೂರು ಸಮೀಪ ನಡೆದಿದೆ.

26 ವರ್ಷದ ಅಯ್ಯಮ್ಮಾಳ್ ಮತ್ತು 32 ವರ್ಷದ ಅನ್ಬುನಾಥನ್ ಮೃತಪಟ್ಟವರು ಎಂದು ಹೇಳಲಾಗಿದೆ. ಒಂದೇ ಊರಿನವರಾದ ಇವರ ನಡುವೆ ಅಕ್ರಮ ಸಂಬಂಧ ಬೆಳೆದಿದ್ದು, ಮಹಿಳೆಯ ಕುಟುಂಬದವರು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

8 ವರ್ಷಗಳ ಹಿಂದೆ ಅಯ್ಯಮ್ಮಾಳ್ ಹಾಗೂ ವಿಮಲ್ ಮದುವೆಯಾಗಿದ್ದು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಈ ನಡುವೆ ಅವಿವಾಹಿತನಾಗಿದ್ದ ಅನ್ಬುನಾಥನ್ ಜೊತೆಗೆ ಅಯ್ಯಮ್ಮಾಳ್ ಅಕ್ರಮ ಸಂಬಂಧ ಬೆಳೆಸಿದ್ದಾಳೆ. ಈ ವಿಚಾರ ಕುಟುಂಬದವರಿಗೆ ಗೊತ್ತಾಗಿ ಸಂಬಂಧ ಮುಂದುವರೆಸದಂತೆ ಎಚ್ಚರಿಕೆ ನೀಡಿದ್ದಾರೆ.

ಆದರೆ, ಅವರು ಮನೆ ಬಿಟ್ಟು ಹೋಗಿದ್ದು ಭಾನುವಾರ ಅಂಡಿಪಟ್ಟಿ ಎಂಬಲ್ಲಿ ಇಬ್ಬರನ್ನೂ ಕೊಲೆ ಮಾಡಲಾಗಿದೆ. ಬೈಕ್ ನಲ್ಲಿ ತೆರಳುತ್ತಿದ್ದ ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಅಡ್ಡಗಟ್ಟಿದ ದುಷ್ಕರ್ಮಿಗಳ ತಂಡ ಕತ್ತು ಕೊಯ್ದು ಹತ್ಯೆ ಮಾಡಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತ ಮಹಿಳೆಯ ಕುಟುಂಬದವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...