alex Certify 2 ತಿಂಗಳ ಮಗುವಿಗಾಗಿ ಚಂದ್ರನ ಅಂಗಳದಲ್ಲಿ ಜಾಗ ಖರೀದಿಸಿದ ಉದ್ಯಮಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2 ತಿಂಗಳ ಮಗುವಿಗಾಗಿ ಚಂದ್ರನ ಅಂಗಳದಲ್ಲಿ ಜಾಗ ಖರೀದಿಸಿದ ಉದ್ಯಮಿ..!

ಮಕ್ಕಳು ಪೋಷಕರ ಕಣ್ಣಿದ್ದಂತೆ. ಮಕ್ಕಳ ಮೇಲೆ ತಮಗಿರುವ ಪ್ರೀತಿಯನ್ನ ಸಾಬೀತು ಪಡಿಸೋಕೆ ಪೋಷಕರು ಏನ್​ ಬೇಕಿದ್ರು ಮಾಡ್ತಾರೆ.

ಅದೇ ರೀತಿ ಸೂರತ್​​ನ ಉದ್ಯಮಿ ವಿಜಯ್​ಭಾಯ್​ ಕಠರಿಯಾ ಎಂಬವರು ತಮ್ಮ 2 ತಿಂಗಳ ಗಂಡು ಮಗುವಿಗೆ ವಿಶೇಷವಾಗಿ ಏನಾದರೂ ಉಡುಗೊರೆ ನೀಡಬೇಕು ಅಂತಾ ಪ್ಲಾನ್​ ಮಾಡಿದ್ದರು. ಹೀಗಾಗಿ ತಮ್ಮ ಮಗು ನಿತ್ಯಾಗಾಗಿ ಚಂದ್ರನ ಅಂಗಳದಲ್ಲಿ ಜಾಗವನ್ನ ಖರೀದಿ ಮಾಡಿದ್ದಾರೆ.

ಇದಕ್ಕಾಗಿ ವಿಜಯ್​​ ನ್ಯೂಯಾರ್ಕ್​ನ ಅಂತಾರಾಷ್ಟ್ರೀಯ ಲುನಾರ್​ ನೋಂದಾವಣಿ ಕೇಂದ್ರದಿಂದ ಅನುಮತಿ ಪಡೆದಿದ್ದಾರೆ. ಇದಕ್ಕಾಗಿ ಬೇಕಾದ ಎಲ್ಲಾ ದಾಖಲೆಗಳನ್ನೂ ವಿಜಯ್​​ ಸಲ್ಲಿಸಿದ್ದರು.

ಇದೀಗ ಈ ಜಾಗವನ್ನ ವಿಜಯ್​ ಮಗುವಿನ ಹೆಸರಿಗೆ ರಿಜಿಸ್ಟರ್​ ಮಾಡಲಾಗಿದೆ. ಈ ಜಾಗವು ಮಾರೆ ಮೊಮೊಸ್ಕೊವಿಯೆನ್ಸ್ ನಲ್ಲಿದೆ.

ಈ ಜಾಗದ ನಿಜವಾದ ಬೆಲೆ ಎಷ್ಟು ಅನ್ನೋದು ಇನ್ನೂ ವರದಿಯಾಗಿಲ್ಲ. ಆದರೆ ಅಲ್ಲಿ ಜಾಗ ಖರೀದಿ ಮಾಡಬೇಕು ಅಂದರೆ 750 ಡಾಲರ್​ ಅಂತೂ ಬೇಕು ಎಂದು ಹೇಳಲಾಗುತ್ತೆ.

ಈ ಮೂಲಕ ಚಂದ್ರನ ಅಂಗಳದಲ್ಲಿ ಭೂಮಿಯನ್ನ ಖರೀದಿಸಿದ ಸೂರತ್​ನ ಮೊದಲ ಉದ್ಯಮಿ ಎಂಬ ಕೀರ್ತಿಗೆ ವಿಜಯ್​ ಸಾಕ್ಷಿಯಾಗಿದ್ದಾರೆ.

ಚಂದ್ರನ ಅಂಗಳದಲ್ಲಿ ಯಾರಿಗೂ ಆಸ್ತಿ ಮಾಡೋಕೆ ಸಾಧ್ಯವಿಲ್ಲ. ಆದರೆ ಈ ಪ್ರಮಾಣ ಪತ್ರವನ್ನ ಪಡೆಯೋಕೆ ಇಷ್ಟು ವೆಚ್ಚವಾಗುತ್ತದೆ. ಚಂದ್ರನ ಅಂಗಳದಲ್ಲಿ ಜಾಗ ಪಡೆಯೋದನ್ನ ಉತ್ತಮ ಗಿಫ್ಟ್ ಎಂದು ಭಾವಿಸಲಾಗುತ್ತೆ.

ಈ ಹಿಂದೆ ರಾಜಸ್ಥಾನದ ಧರ್ಮೇಂದ್ರ ಅನಿಜಾ ಎಂಬವರು ಚಂದ್ರನ ಅಂಗಳದಲ್ಲಿ ಮೂರು ಎಕರೆ ಭೂಮಿ ಖರೀದಿ ಮಾಡಿ ಅದನ್ನ ತಮ್ಮ ಪತ್ನಿ ಸಪ್ನಾ ಅನಿಜಾರಿಗೆ ಮದುವೆ ವಾರ್ಷಿಕೋತ್ಸವದಂದು ಗಿಫ್ಟ್ ರೂಪದಲ್ಲಿ ನೀಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...