alex Certify ಈ ಕಾರಣಕ್ಕೆ ವಾಟ್ಸಾಪ್​ ಸೇವೆ ನಿಯಮ ವಿರುದ್ಧದ ಅರ್ಜಿ ವಿಚಾರಣೆ ಮಾಡಲ್ಲವೆಂದ ಸುಪ್ರೀಂ ಕೋರ್ಟ್.​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ವಾಟ್ಸಾಪ್​ ಸೇವೆ ನಿಯಮ ವಿರುದ್ಧದ ಅರ್ಜಿ ವಿಚಾರಣೆ ಮಾಡಲ್ಲವೆಂದ ಸುಪ್ರೀಂ ಕೋರ್ಟ್.​..!

ವಾಟ್ಸಾಪ್​ ಮೆಸೆಂಜರ್​ನ ಹೊಸ ಪ್ರೈವೆಸಿ ಪಾಲಿಸಿಯ ವಿರುದ್ಧ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್​ ನಿರಾಕರಿಸಿದೆ. ಈ ಹೊಸ ಸೇವಾ ನಿಯಮದ ವಿರುದ್ಧ ಸಿಎಐಟಿ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿತ್ತು. ಆದರೆ ಈ ಸಂಬಂಧ ವಿಚಾರಣೆಗೆ ಸರ್ವೋಚ್ಛ ನ್ಯಾಯಾಲಯ ನಿರಾಕರಿಸಿದೆ. ದೆಹಲಿ ಹೈಕೋರ್ಟ್​ನಲ್ಲಿ ಈ ಸಂಬಂಧ ವಿಚಾರಣೆ ಮೊದಲೇ ನಡೆಯುತ್ತಿರೋದ್ರಿಂದ ಅರ್ಜಿಯನ್ನ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ.

16 ಜನವರಿಯಂದು ಸಿಎಐಟಿ ಸುಪ್ರೀಂ ಕೋರ್ಟ್​ನಲ್ಲಿ ವಾಟ್ಸಾಪ್​​ನ ಹೊಸ ಸೇವಾನಿಯಮವನ್ನ ಪ್ರಶ್ನಿಸಿ ಅರ್ಜಿ ಸಲ್ಲಿಸಿತ್ತು. ಆದರೆ ವಾಟ್ಸಾಪ್​ನ ಹೊಸ ಸೇವಾ ನಿಯಮವನ್ನ ಪ್ರಶ್ನಿಸಿ ದೆಹಲಿ ಹೈಕೋರ್ಟ್​ನಲ್ಲಿ ಈಗಾಗಲೇ ಅರ್ಜಿ ವಿಚಾರಣೆ ಜಾರಿಯ್ಲಲಿದೆ.

ಅರ್ಜಿ ವಿಚಾರಣೆ ವೇಳೆ ಕೋರ್ಟ್​, ವಾಟ್ಸಾಪ್​ ಒಂದು ಖಾಸಗಿ ಮೆಸೆಜಿಂಗ್ ಅಪ್ಲಿಕೇಶನ್​ ಆಗಿದ್ದು ಇದರ ಸೇವಾನಿಯಮದ ಬಗ್ಗೆ ಗೊಂದಲ ಇರುವವರು ಬೇರೆ ಅಪ್ಲಿಕೇಶನ್​ಗಳನ್ನ ಬಳಕೆ ಮಾಡಿ ಎಂದು ಸಲಹೆ ನೀಡಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...