alex Certify ಬ್ರೇಕಿಂಗ್ ನ್ಯೂಸ್: ಟೆಲಿಕಾಂ ಕಂಪನಿಗಳಿಗೆ ಬಾಕಿ ಎಜಿಆರ್ ಶುಲ್ಕ ಪಾವತಿಸಲು 10 ವರ್ಷ ನೀಡಿದ ಸುಪ್ರೀಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ರೇಕಿಂಗ್ ನ್ಯೂಸ್: ಟೆಲಿಕಾಂ ಕಂಪನಿಗಳಿಗೆ ಬಾಕಿ ಎಜಿಆರ್ ಶುಲ್ಕ ಪಾವತಿಸಲು 10 ವರ್ಷ ನೀಡಿದ ಸುಪ್ರೀಂ

The Supreme Court delivered its verdict on Tuesday in the AGR dues case.

ಖಾಸಗಿ ಟೆಲಿಕಾಂ ಕಂಪನಿಗಳಿಂದ ಬಾಕಿ ಎಜಿಆರ್ ಶುಲ್ಕ ಪಾವತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಟೆಲಿಕಾಂ ಕಂಪನಿಗಳಿಗೆ ಸುಪ್ರೀಂ ಕೋರ್ಟ್ 10 ವರ್ಷ ಕಾಲಾವಕಾಶ ನೀಡಿದೆ. ಮಂಗಳವಾರ ಬಾಕಿ ಹಣ ಪಾವತಿಸಲು ಟೆಲಿಕಾಂ ಕಂಪನಿಗಳಿಗೆ ಸುಪ್ರೀಂ ಕೋರ್ಟ್ 10 ವರ್ಷಗಳ ಕಾಲಾವಕಾಶ ನೀಡಿದೆ.

ಸಮಯವನ್ನು ಕಡಿಮೆ ಮಾಡಿದ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠವು ಕೆಲ ಸೂಚನೆಗಳನ್ನು ನೀಡಿದೆ. ಕೋವಿಡ್ -19 ಕಾರಣದಿಂದಾಗಿ ಟೆಲಿಕಾಂ ಕಂಪನಿಗಳು 2021 ರ ವೇಳೆಗೆ ಶೇಕಡಾ 10 ರಷ್ಟು ಬಾಕಿ ಪಾವತಿಸಬೇಕಾಗುತ್ತದೆ. ಬಾಕಿ ಮೊತ್ತವನ್ನು ಮಾಚ್ 31, 2031 ರೊಳಗೆ ಪಾವತಿಸಬೇಕಾಗುತ್ತೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಈ ಹಿಂದೆ ಕೇಂದ್ರ ಸರ್ಕಾರ, ಟೆಲಿಕಾಂ ಕಂಪನಿಗಳ ಆರ್ಥಿಕ ನೆರವು ಹಾಗೂ ಬಾಕಿ ಪಾವತಿ ನಿರ್ಬಂಧವನ್ನು ಸಡಿಲಿಸಿತ್ತು. ಇದನ್ನು ಪ್ರಶ್ನಿಸಿದ್ದ ಸುಪ್ರೀಂ ಟೆಲಿಕಾಂ ಕಂಪನಿ ಹಾಗೂ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು. ಈ ಮಧ್ಯೆ ಕೇಂದ್ರ ಸರ್ಕಾರ, ಟೆಲಿಕಾಂ ಕಂಪನಿಗಳಿಗೆ ಎಜಿಆರ್ ಪಾವತಿಸಲು 20 ವರ್ಷಗಳ ಕಾಲಾವಕಾಶ ನೀಡಬೇಕೆಂದು ಸುಪ್ರೀಂನಲ್ಲಿ ಮನವಿ ಸಲ್ಲಿಸಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...