alex Certify ಮಾಜಿ ಸಚಿವ ಚಿನ್ಮಯಾನಂದ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಜಿ ಸಚಿವ ಚಿನ್ಮಯಾನಂದ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್

ಬಿಜೆಪಿ ಮಾಜಿ ಸಚಿವ ಚಿನ್ಮಯಾನಂದ ವಿರುದ್ಧ ಕಳೆದ ವರ್ಷ ಅತ್ಯಾಚಾರದ ಆರೋಪ ಹೊರಿಸಿದ್ದ 23 ವರ್ಷದ ಕಾನೂನು ವ್ಯಾಸಂಗ ವಿದ್ಯಾರ್ಥಿನಿ ತಮ್ಮ ಆರೋಪ ಹಿಂಪಡೆದಿದ್ದಾರೆ.

ಮಂಗಳವಾರ ಲಕ್ನೋ ವಿಶೇಷ ನ್ಯಾಯಾಲಯದಲ್ಲಿ ನಡೆದ ವಿಚಾರಣೆ ವೇಳೆ ಯುವತಿ ಈ ನಿರ್ಧಾರ ಕೈಗೊಂಡಿದ್ದಾರೆ. ಕಳೆದ ವರ್ಷ ಅತ್ಯಾಚಾರ ಆರೋಪದಡಿಯಲ್ಲಿ ಜೈಲುಪಾಲಾಗಿದ್ದ 72 ವರ್ಷದ ಚಿನ್ಮಯಾನಂದ ಫೆಬ್ರವರಿಯಲ್ಲಿ ಜಾಮೀನಿನ ಮೂಲಕ ಹೊರಬಂದಿದ್ರು.

ಕೋರ್ಟ್​ನಲ್ಲಿ ಯುವತಿ ತನ್ನ ಹೇಳಿಕೆ ವಾಪಸ್​ ಪಡೆಯುತ್ತಿದ್ದಂತೆ ಆಕ್ರೋಶಗೊಂಡ ಪ್ರಾಸಿಕ್ಯೂಶನ್​ ಸುಳ್ಳು ಕೇಸ್​ ದಾಖಲು ಮಾಡಿದ್ದಕ್ಕಾಗಿ ಯುವತಿ ವಿರುದ್ಧ ಸೆಕ್ಷನ್​ 340 ಅಡಿಯಲ್ಲಿ ಕೇಸ್​ ದಾಖಲು ಮಾಡಬೇಕು ಅಂತಾ ಆಗ್ರಹಿಸಿದ್ರು.

ಉತ್ತರ ಪ್ರದೇಶದ ಶಹಜಹಾನ್​ಪುರದಲ್ಲಿರೋ ಚಿನ್ಮಯಾನಂದ ಮಾಲೀಕತ್ವದ ಕಾನೂನು ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಕಳೆದ ವರ್ಷ ಸೆಪ್ಟೆಂಬರ್​ 5ರಂದು ಮಾಜಿ ಸಚಿವರ ವಿರುದ್ಧ ಕೊಲೆ ಯತ್ನ ಹಾಗೂ ಅತ್ಯಾಚಾರದ ಆರೋಪ ಹೊರಿಸಿದ್ದಳು. ಪ್ರಕರಣದ ಸಂಬಂಧ ತನಿಖೆ ನಡೆಸಿದ ಪೊಲೀಸರು ಸೆಪ್ಟೆಂಬರ್​ 20, 2019ರಲ್ಲಿ ಚಿನ್ಮಯಾನಂದರನ್ನ ಬಂಧಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...