alex Certify ಅಚ್ಚರಿಗೊಳಿಸುತ್ತೆ ರಿಯಲ್‌ ʼಬಾಹುಬಲಿʼಯ ಸಾಹಸ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಗೊಳಿಸುತ್ತೆ ರಿಯಲ್‌ ʼಬಾಹುಬಲಿʼಯ ಸಾಹಸ…!

ವ್ಯಕ್ತಿಯೊಬ್ಬ ತನ್ನ ತಲೆ ಮೇಲೆ ಬೈಕ್ ಹೊತ್ತು ಬಸ್ ನ ಟಾಪ್ ಹತ್ತುವ ವಿಡಿಯೋ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಡಾ.ಅಜಯಿತಾ ಎಂಬುವವರು ಟ್ವಿಟರ್ ನಲ್ಲಿ ಅಪ್ ಲೋಡ್ ಮಾಡಿದ 9 ಸೆಕೆಂಡ್ ವಿಡಿಯೋವನ್ನು 2 ಲಕ್ಷ 35 ಸಾವಿರ ಜನ ನೋಡಿದ್ದಾರೆ.

ಡಾ. ಅಜಯಿತಾ “ಭಾರತ ಎಂಬುದು ನಂಬಲಾಗದಷ್ಟು ಅಚ್ಚರಿಗಳನ್ನು ಹೊಂದಿದೆ. ಈ ಒಂದು ಫ್ರೇಮ್ ನಲ್ಲೇ ಎಷ್ಟು ಶಕ್ತಿ ಇದೆ” ಎಂದು ಕ್ಯಾಪ್ಶನ್ ನೀಡಿದ್ದಾರೆ. ವಿಡಿಯೋಕ್ಕೆ ಹಾಸ್ಯದ ಹಾಗೂ ಗಂಭೀರ ಕಮೆಂಟ್ ಗಳು ಬಂದಿವೆ.

ಒಬ್ಬ ಬೈಕ್ ಹೊತ್ತ ಕಾರ್ಮಿಕನನ್ನು “ಬಾಹುಬಲಿ” ಎಂದು ಕರೆದಿದ್ದರೆ, ಇನ್ನೊಬ್ಬ “ಶಕ್ತಿಮಾನ್” ಎಂದು ಕರೆದಿದ್ದಾನೆ. ಮತ್ತೊಬ್ಬ ತಾನು ಕಾಲೇಜ್ ಗೆ ಹೋಗುವಾಗ ಬೈಕ್ ಅನ್ನು ಬಸ್ ಮೇಲೆ ಹಾಕಿಕೊಂಡು ಹೋಗಿದ್ದೆ ಎಂದು ನೆನಪಿಸಿಕೊಂಡಿದ್ದಾನೆ. ಇನ್ನೊಬ್ಬ “ಹಸಿದ ಹೊಟ್ಟೆ ಏನನ್ನು ಬೇಕಾದರೂ ಮಾಡಿಸುತ್ತದೆ” ಎಂದು ಗಂಭೀರ ಕಮೆಂಟ್ ಮಾಡಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...