alex Certify UPSC ಪರೀಕ್ಷೆಯಲ್ಲಿ 420ನೇ ರ‍್ಯಾಂಕ್ ಪಡೆದ ’ರಾಹುಲ್ ಮೋದಿ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

UPSC ಪರೀಕ್ಷೆಯಲ್ಲಿ 420ನೇ ರ‍್ಯಾಂಕ್ ಪಡೆದ ’ರಾಹುಲ್ ಮೋದಿ’

ಕಾಕತಾಳಿಯ ಘಟನೆಯೊಂದರಲ್ಲಿ, ಕಳೆದ ವರ್ಷದ ಕೇಂದ್ರ ಲೋಕಸೇವಾ ಆಯೋಗದ ವಿವಿಧ ಹುದ್ದೆಗಳಿಗೆ ನಡೆಸಿದ ನಾಗರಿಕ ಸೇವಾ ಪರೀಕ್ಷೆಯಲ್ಲಿ ರಾಹುಲ್ ಮೋದಿ ಹೆಸರಿನ ಅಭ್ಯರ್ಥಿಯೊಬ್ಬರು 420ನೇ ರ‍್ಯಾಂಕ್‌ನೊಂದಿಗೆ ಪಾಸಾಗಿದ್ದಾರೆ.

ಭಾರತೀಯ ರಾಜಕಾರಣದ ಇಬ್ಬರು ಕಟ್ಟಾ ಎದುರಾಳಿಗಳಾದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಬ್ಬರ ಹೆಸರನ್ನೂ ಸಹ ಇಟ್ಟುಕೊಂಡಿರುವ ಈ ಅಭ್ಯರ್ಥಿ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ.

ಈ ವರ್ಷ IAS, IPS , IRS, IFS ಸೇರಿದಂತೆ ವಿವಿಧ ಹುದ್ದೆಗಳಿಗೆ ಯುಪಿಎಸ್‌ಸಿ ಪರೀಕ್ಷೆಯನ್ನು ತೆಗೆದುಕೊಂಡ 829 ಮಂದಿ ಆಯ್ಕೆಯಾಗಿದ್ದಾರೆ. ಪ್ರಾಥಮಿಕ, ಮುಖ್ಯ ಹಾಗೂ ಸಂದರ್ಶನಗಳಲ್ಲಿ ಅಭ್ಯರ್ಥಿಗಳ ಪ್ರದರ್ಶನವನ್ನು ಆಧರಿಸಿ ಅವರನ್ನು ಈ ಸೇವೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...