alex Certify ಜಂಬೋ‌ ಜಳಕ – ನೋಡುಗರಿಗೆ ಪುಳಕ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಂಬೋ‌ ಜಳಕ – ನೋಡುಗರಿಗೆ ಪುಳಕ…!

ಆನೆಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬೇಜಾನ್ ವೈರಲ್ ಆಗುತ್ತವೆ.‌

ಆನೆಯ ಮರಿಯೊಂದು ನಡೆಯಲು ಕಲಿಯುವ, ನೀರಿನೊಂದಿಗೆ ಆಟವಾಡುವ ವಿಡಿಯೋ ಇತ್ತೀಚೆಗೆ ಪ್ರಸಿದ್ಧವಾಗಿತ್ತು.‌ ಈಗ ಎರಡು ಆನೆಗಳ ಸ್ನಾನದ ವಿಡಿಯೋ ಶೇರ್, ಕಮೆಂಟ್, ಲೈಕ್ ಪಡೆಯುತ್ತಿದೆ.‌

ಐಎಫ್ಎಸ್ ಅಧಿಕಾರಿ ರಮೇಶ್ ಪಾಂಡೆ‌ ಎಂಬುವವರು ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು, ಎರಡು ಆನೆಗಳು ನೀರಿನಲ್ಲಿ ಇಳಿದು ಸೊಂಡಿಲ ಮೂಲಕ ನೀರು ಎರಚಿಕೊಳ್ಳುತ್ತ ಪರಸ್ಪರ ಸ್ನಾನ ಮಾಡಿಸಿ ಖುಷಿಪಡುತ್ತವೆ.

“ಇದು ಸಂಪೂರ್ಣ ಮೋಜು, ಖುಷಿ ಮತ್ತು ಆನಂದದ ಕ್ಷಣಗಳು. ಆನೆಗಳು ನೀರಿನ ಕೊಳ, ಮಣ್ಣನ್ನು ಬೇಸಿಗೆಯಲ್ಲಿ ಇಷ್ಟಪಡುತ್ತವೆ” ಎಂದು ರಮೇಶ್ ಪಾಂಡೆ ಬರೆದಿದ್ದಾರೆ‌.

ವಿಡಿಯೋವನ್ನು 13,400 ಜನರು ವೀಕ್ಷಿಸಿದ್ದು, 1300 ಜನ ಇಷ್ಟಪಟ್ಟಿದ್ದಾರೆ.‌‌ 11 ಕ್ಷಣಗಳ ಸಂಪೂರ್ಣ ಆನಂದ ಎಂದು ಐಎಫ್ಎಸ್ ಅಧಿಕಾರಿ ಸುಶಾಂತ ನಂದಾ ಕಮೆಂಟ್ ಮಾಡಿದ್ದಾರೆ. ಇದೇ ರೀತಿ ಹಲವು ನೋಡುಗರು ಕಮೆಂಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...