alex Certify ಸಖತ್ತಾಗಿದೆ ಕಾರ್ ಪಾರ್ಕಿಂಗ್ ನ ಜಾಗ ಉಳಿತಾಯದ ಐಡಿಯಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಖತ್ತಾಗಿದೆ ಕಾರ್ ಪಾರ್ಕಿಂಗ್ ನ ಜಾಗ ಉಳಿತಾಯದ ಐಡಿಯಾ

ಈಗ ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿ ಕಾರು ಪಾರ್ಕಿಂಗ್ ನದ್ದೇ ದೊಡ್ಡ ಸಮಸ್ಯೆಯಾಗಿದೆ. ಇಂಥ ಸಂದರ್ಭದಲ್ಲಿ ಜಾಗ ಉಳಿತಾಯವಾಗುವ ಕಾರು ಪಾರ್ಕಿಂಗ್ ವ್ಯವಸ್ಥೆಯ ವಿಡಿಯೋವೊಂದು ಖ್ಯಾತ ಉದ್ಯಮಿ ಆನಂದ ಮಹೀಂದ್ರ ಅವರ ಮೆಚ್ಚುಗೆ‌ ಗಳಿಸಿದೆ.

ಇಲ್ಲಿ ಮಾರುತಿ ಕಾರೊಂದನ್ನು ಅದರ ಮಾಲೀಕ ಹಿಮ್ಮುಖವಾಗಿ ಸರಳುಗಳುಳ್ಳ ಲಿಫ್ಟಿಂಗ್ ಜಾಕ್ ಮೇಲೆ ನಿಲ್ಲಿಸುತ್ತಾನೆ. ಬಳಿಕ ಕಾರಿನಿಂದ ಇಳಿದು ಆರಾಮವಾಗಿ ಆ ಜಾಕ್ ಅನ್ನು ಮನೆಯ ಅಪ್ ಸ್ಟೇರ್ ಕೆಳಗಿನ ಸ್ಟೇರ್ ಕೇಸ್ ಜಾಗಕ್ಕೆ ತಳ್ಳುತ್ತಾನೆ. ಇದರಿಂದ ಬಹಳಷ್ಟು ಜಾಗ ಉಳಿತಾಯವಾಗಿದೆ.

ಈ ಬಗ್ಗೆ ಬರೆದುಕೊಂಡಿರುವ ಆನಂದ್, ಇಂಥದ್ದೇ ಕ್ರಿಯೇಟಿವ್ ಮಾದರಿಯನ್ನು ನಾನು ಪಂಜಾಬ್ ನಲ್ಲಿ ನೋಡಿದ್ದೆ. ಆದರೆ, ಇದು ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಇದೆ. ನಾನು ಜಾಮಿತಿಯ ಸೂತ್ರದ ಮೂಲಕ ಪರಿಹಾರ ಕಂಡುಕೊಳ್ಳುವುದನ್ನು ಇಷ್ಟಪಡುತ್ತೇನೆ. ಈ ಉಪಾಯ ಮಾಡಿದಾತ ಒಂದು ವೇಳೆ ನನಗೆ ಸಿಕ್ಕಲ್ಲಿ ಇನ್ನಷ್ಟು ಒಳ್ಳೊಳ್ಳೆ ಐಡಿಯಾ ಸಿಕ್ಕು ಅನುಕೂಲವಾಗುತ್ತದೆ ಎಂದೂ ಬರೆದುಕೊಂಡಿದ್ದಾರೆ. ಈ ವಿಡಿಯೋ ಈಗ 3.8 ಲಕ್ಷ ವೀಕ್ಷಣೆ ಕಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...