alex Certify ಶಾಕಿಂಗ್‌ ಸುದ್ದಿ: ನಿವೃತ್ತ ಬ್ಯಾಂಕ್ ನೌಕರನ ನಿರುದ್ಯೋಗಿ ಪುತ್ರ ನಕಲಿ ಶಾಖೆಯನ್ನೇ ತೆರೆದ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್‌ ಸುದ್ದಿ: ನಿವೃತ್ತ ಬ್ಯಾಂಕ್ ನೌಕರನ ನಿರುದ್ಯೋಗಿ ಪುತ್ರ ನಕಲಿ ಶಾಖೆಯನ್ನೇ ತೆರೆದ….!

ಬ್ಯಾಂಕ್ ಮಾಜಿ ಉದ್ಯೋಗಿಯ‌ ಮಗ ನಕಲಿ ಬ್ಯಾಂಕ್ ಬ್ರಾಂಚ್ ಆರಂಭಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಕಮಲ್ ಬಾಬು ಎಂಬಾತ ಈ ಕೃತ್ಯದ ಮಾಸ್ಟರ್ ಮೈಂಡ್. ಈತ ನಿರುದ್ಯೋಗಿಯಾಗಿದ್ದು, ಪೋಷಕರು ಬ್ಯಾಂಕ್ ನಿವೃತ್ತ ನೌಕರರಾಗಿದ್ದರು.

ಬಂಧನಕ್ಕೊಳಗಾದ ಇತರ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬ ಮುದ್ರಣಾಲಯ ನಡೆಸುತ್ತಿದ್ದ ವ್ಯಕ್ತಿಯು ಸೇರಿದ್ದಾನೆ. ಮುದ್ರಣಾಲಯದಲ್ಲಿ ಚಲನ್, ರಸೀದಿ, ಸ್ಡ್ಯಾಂಪ್ ಹಾಗೂ ಇತರ ದಾಖಲೆಗಳನ್ನು ಮುದ್ರಿಸಲಾಗಿದೆ.

ಗ್ರಾಹಕರೊಬ್ಬರ ದೂರಿನ ಅನುಸಾರ ಪನ್ರುತಿ ಪ್ರದೇಶದಲ್ಲಿ ಅಸಲಿ ಬ್ಯಾಂಕಿನ ಎರಡು ಶಾಖೆಗಳಿದ್ದು, ಮೂರನೆಯದು ಅಲ್ಲಿ ಇಲ್ಲ ಎಂಬುದರ ಆಧಾರದ ಮೇಲೆ ದಾಳಿ ನಡೆಸಿದಾಗ ಪ್ರಕರಣ ಬಯಲಾಗಿದೆ. ಎಸ್.ಬಿ.ಐ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಮತ್ತು ಮೂಲಸೌಕರ್ಯಗಳನ್ನು ನೋಡಿ ಆಶ್ಚರ್ಯಚಕಿತರಾದರು ಎಂದು ತಿಳಿದುಬಂದಿದೆ. ಮೂರು ತಿಂಗಳ ಹಿಂದಷ್ಟೇ ಈ ಶಾಖೆ ಕಾರ್ಯಾರಂಭ ಮಾಡಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...