alex Certify ವರ್ಷದ ಬಳಿಕ ಮಾಲೀಕನ ನೋಡಿ ಕುಣಿದಾಡಿದ ಶ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವರ್ಷದ ಬಳಿಕ ಮಾಲೀಕನ ನೋಡಿ ಕುಣಿದಾಡಿದ ಶ್ವಾನ

ಮನೆಯಿಂದ ತಪ್ಪಿಸಿಕೊಂಡು ಹೋಗಿದ್ದ ಶ್ವಾನ ವರ್ಷಗಳ ಬಳಿಕ ಮಾಲೀಕನ ಮಡಿಲು ಸೇರಿದ ಖುಷಿಯಲ್ಲಿ, ಮಾಲೀಕರ ಮೇಲೆ ಹಾರಿ ಮುದ್ದಾಡಿದ ವಿಡಿಯೋ ವೈರಲ್‌ ಆಗಿದೆ.

ಐಎಫ್‌ಎಸ್‌ ಅಧಿಕಾರಿ ಸುಶಾಂತ್‌ ನಂದಾ ಅವರು 2019ರ ವಿಡಿಯೋ ಒಂದನ್ನು ಶೇರ್‌ ಮಾಡಿದ್ದು, ಅದರಲ್ಲಿ ಮನೆಯಿಲ್ಲದ ವ್ಯಕ್ತಿಯೊಬ್ಬನ ಶ್ವಾನ ಕಳೆದು ಹೋಗಿತ್ತು. ಆದರೆ ಬಳಿಕ ಆ ಶ್ವಾನ ಆತನ ತೆಕ್ಕೆಗೆ ಬಂದಿದೆ. ಶೆಲ್ಟರ್‌ನಲ್ಲಿದ್ದ ವ್ಯಕ್ತಿಯ ಬಳಿ ಬಂದ ಶ್ವಾನ, ಮಾಲೀಕನನ್ನು ನೋಡುತ್ತಿದ್ದಂತೆ ಓಡಿ ಬಂದಿದೆ. ಬಳಿಕ ವ್ಯಕ್ತಿಯ ಮೈಮೇಲೆ ಹಾರಿರುವ ನಾಯಿ, ಮಾಲೀಕನನ್ನು ನೆಕ್ಕುವುದರೊಂದಿಗೆ ಬಾಲ ಆಡಿಸಲು ಶುರುಮಾಡಿದೆ.

ಈ ರೀತಿ ಶ್ವಾನವನ್ನು ಕಳೆದುಕೊಂಡ ವ್ಯಕ್ತಿಯನ್ನು ಆಂಥೋನಿ ರೋಜರ್ಸ್‌ ಎಂದು ಹೇಳಲಾಗಿದೆ. ಆತನ ಪ್ರೀತಿಯ ಬೋಬೋ ಮರಳಿ ಪಡೆದಿದ್ದಕ್ಕೆ ಆತನ ಖುಷಿಗೆ ಪಾರವೇ ಇರಲಿಲ್ಲ. ಈ ವಿಡಿಯೋವನ್ನು ಹಾಕಿರುವ ನಂದಾ ಅವರು, ʼಮನೆಯಿಲ್ಲದಿದ್ದರೂ ಮನಸ್ಸಿನ ತುಂಬಾ ಪ್ರೀತಿ ತುಂಬಿದೆʼ ಎಂದಿದ್ದಾರೆ. ಇದೀಗ ಈ ವಿಡಿಯೋ ಏಳು ಸಾವಿರಕ್ಕೂ ಹೆಚ್ಚು ಲೈಕ್ಸ್‌ ಹಾಗೂ 123 ರಿಟ್ವೀಟ್‌ ಹಾಗೂ ನೂರಾರು ಲೈಕ್ಸ್‌ಗಳನ್ನು ಪಡೆದುಕೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...