alex Certify ‘ಕರಾಚಿ ಸ್ವೀಟ್ಸ್’ ಹೆಸರು ಬದಲಿಸಲು ಒತ್ತಾಯಿಸಿದ ಶಿವಸೇನೆ ನಾಯಕನ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕರಾಚಿ ಸ್ವೀಟ್ಸ್’ ಹೆಸರು ಬದಲಿಸಲು ಒತ್ತಾಯಿಸಿದ ಶಿವಸೇನೆ ನಾಯಕನ ವಿಡಿಯೋ ವೈರಲ್

ಮುಂಬೈನ ಕರಾಚಿ ಸ್ವೀಟ್ಸ್​ ಶಾಪ್​ನ ಹೆಸರು ಬದಲಾಯಿಸುವಂತೆ ಶಿವಸೇನೆ ನಾಯಕ ನಿತಿನ್​​ ಮಧುಕರ್​ ನಂದಗಾಂವ್ಕರ್​​ ಒತ್ತಾಯಿಸಿದ್ದು ವಿಡಿಯೋ ವೈರಲ್​ ಆಗಿದೆ. ಕರಾಚಿ ಹೆಸರು ಪಾಕಿಸ್ತಾನಕ್ಕೆ ಸಂಬಂಧಿಸಿದ್ದಾಗಿದೆ. ಮರಾಠಿಗೆ ಸಂಬಂಧಿಸಿದ ಯಾವುದಾದರೂ ಹೆಸರನ್ನ ಇಡುವಂತೆ ಶಿವಸೇನೆ ನಾಯಕ ವಿಡಿಯೋದಲ್ಲಿ ಒತ್ತಾಯಿಸುತ್ತಿದ್ದಾರೆ.

ಪಾಕಿಸ್ತಾನ ಮತ್ತು ಭಯೋತ್ಪಾದಕರ ನಡುವೆ ಒಡನಾಟ ಹೊಂದಿರುವ ಈ ಹೆಸರನ್ನ ಬದಲಾಯಿಸಿ ಅಂತಾ ನಿತಿನ್​ ಹೇಳಿದ್ದಾರೆ. ಇದಕ್ಕೆ ಉತ್ತರ ನೀಡಿದ ಕರಾಚಿ ಸ್ವೀಟ್​ ಶಾಪ್​ ಮಾಲೀಕ  ತಾವು ಕರಾಚಿ ಮೂಲದವರೆಂದೂ ಪೂರ್ವಜರ ನೆನಪಿಗಾಗಿ ಈ ಹೆಸರು ಇಟ್ಟಿದ್ದಾಗಿ ಹೇಳಿದ್ದಾರೆ. ಆದರೆ ಅಂಗಡಿ ಮಾಲೀಕನ ಯಾವುದೇ ಸಮರ್ಥನೆಗೆ ಮಣಿಯದ ಶಿವಸೇನೆ ಮುಖಂಡ ಮರಾಠಿಯಲ್ಲೇ ಯಾವುದಾದರೊಂದು ಹೆಸರಿಡುವಂತೆ ಒತ್ತಾಯಿಸಿದ್ದಾರೆ.

ಅಂಗಡಿ ಮರುನಾಮಕರಣ ಮಾಡಲು ಯಾವುದೇ ಕೆಲಸಕ್ಕೆ ನಾನು ಸಹಾಯ ಮಾಡುತ್ತೇನೆ. ಆದರೆ 15 ದಿನಗಳಲ್ಲಿ ಈ ಹೆಸರು ಬದಲಾಗಬೇಕು ಎಂದು ನಂದಗಾಂವ್ಕರ್​​ ವಿಡಿಯೋದಲ್ಲಿ ಹೇಳಿದ್ದಾರೆ. ಸದ್ಯ ಅಂಗಡಿ ಮಾಲೀಕರು ನಾಮಫಲಕವನ್ನ ಕಾಗದದಿಂದ ಮುಚ್ಚಿದ್ದಾರೆ.

— ANI (@ANI) November 19, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...