alex Certify ಪರೀಕ್ಷೆ ತಪ್ಪಿಸಿಕೊಳ್ಳಲು ವಿದ್ಯಾರ್ಥಿನಿ ಮಾಡಿದ ಪ್ಲಾನ್ ಕೇಳಿದ್ರೆ ಶಾಕ್ ಆಗ್ತೀರಾ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪರೀಕ್ಷೆ ತಪ್ಪಿಸಿಕೊಳ್ಳಲು ವಿದ್ಯಾರ್ಥಿನಿ ಮಾಡಿದ ಪ್ಲಾನ್ ಕೇಳಿದ್ರೆ ಶಾಕ್ ಆಗ್ತೀರಾ….!

Schoolgirl Faked 'Demonic Possession' To Get Out of Exam, But It Backfired

ಪರೀಕ್ಷೆ, ಹೋಂ ವರ್ಕ್ ತಪ್ಪಿಸಿಕೊಳ್ಳಲು ನೂರೆಂಟು ಕುಂಟು ನೆಪ ಹೇಳುತ್ತಿದ್ದ ಶಾಲಾ ದಿನಗಳು ನಿಮಗೂ ನೆನಪಿರಬಹುದು. ಇಲ್ಲೊಬ್ಬ ಬಾಲಕಿ ಪರೀಕ್ಷೆ ಹಾಗೂ ಹೋಂ ವರ್ಕ್ ತಪ್ಪಿಸಿಕೊಳ್ಳಲು ಭೂತ ಚೇಷ್ಟೆ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ಘಟನೆ ನಡೆದಿದೆ.

ಖತೀಜಾ ಎಂಬ ವಿದ್ಯಾರ್ಥಿನಿ ಭೂತ‌ ಹಿಡಿದುಕೊಂಡಂತೆ ಆಡುತ್ತಿರುವ ವಿಡಿಯೋ ಟಿಕ್ ಟಾಕ್ ನಲ್ಲಿ ಅಪ್ಲೋಡ್ ಆಗಿದೆ. ಆಕೆ ಹತ್ತಾರು ಪೇಜ್ ಗಳಷ್ಟು ಇರುವ ಹೋಂ ವರ್ಕ್ ಮಾಡಿರಲಿಲ್ಲ. ಮರುದಿನ‌ ಇದ್ದ‌ ಪರೀಕ್ಷೆಗೆ ತಯಾರಿ ಮಾಡಿರಲಿಲ್ಲ. ಇದರಿಂದ‌ ಡೆಸ್ಕ್ ನ ಎದುರು ಕುಳಿತು ಆಕೆ ದೊಡ್ಡ ಕಣ್ಣು ಬಿಟ್ಟು ಭೂತ ಹಿಡಿದಂತೆ ನಟನೆ ಮಾಡಲು ಆರಂಭಿಸಿದ್ದಳು. ಅದನ್ನು ನೋಡಿದ ಆಕೆಯ ಪಕ್ಕದಲ್ಲಿದ್ದ ಸಹಪಾಠಿ “ಖತೀಜಾಳಿಗೆ ಭೂತ ಮೆಟ್ಟಿಕೊಂಡಿದೆ” ಎಂದು ಕೂಗಲಾರಂಭಿಸಿದರು. ಆದರೆ, ಅದರ ಮುಂದೆ ನಡೆಯುವ ಘಟನೆಯನ್ನು ಖತೀಜಾ ಊಹಿಸಿರಲಿಲ್ಲ.

ಆಕೆಯನ್ನು ಪ್ರಾರ್ಥನಾ ಕೋಣೆಯೊಂದಕ್ಕೆ‌ ಕರೆದೊಯ್ಯಲಾಯಿತು. ಮೂವರು ಕೋಲು‌ ಹಿಡಿದು ಆಗಮಿಸಿದರು. ಅದರಲ್ಲೊಬ್ಬ ಆಕೆಗೆ ಕೋಲಿನಿಂದ ಹೊಡೆದು “ನೀನು ಯಾಕೆ ಖತೀಜಾಳನ್ನು ಹಿಡಿದುಕೊಂಡಿದ್ದೀಯಾ..? ಎಂದು ಪ್ರಶ್ನಿಸಲಾರಂಭಿಸಿದ. ತನ್ನಲ್ಲಿ ಭೂತವಿಲ್ಲ. ನಾನೇ ನಾಟಕವಾಡಿದ್ದು ಎಂದು ಹೇಳಿದರೂ ಆತ ನಂಬಲು ಸಿದ್ಧನಿರಲಿಲ್ಲ‌. ಇದರಿಂದ ಖತೀಜಾ ಸಾಕಷ್ಟು ಛಡಿಯೇಟು ತಿನ್ನಬೇಕಾಯಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...