alex Certify ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ ನಟಿ ಕಂಗನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ ನಟಿ ಕಂಗನಾ

ನಟಿ ಕಂಗನಾ ಇತ್ತೀಚೆಗೆ ಬಾಲಿವುಡ್ ‌ನಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ ನಟಿ. ಬಾಲಿವುಡ್‌ನ ಹಲವಾರು ವಿಚಾರಗಳ ಬಗ್ಗೆ ಹಾಗೂ ಅನೇಕ ಮಂದಿ ನಡೆದುಕೊಳ್ಳುವ ಬಗ್ಗೆ ಈ ನಟಿ ಆಕ್ರೋಶ ವ್ಯಕ್ತಪಡಿಸಿದ್ದರು.

ಸುಶಾಂತ್ ಸಿಂಗ್ ಆತ್ಮಹತ್ಯೆ ವಿಚಾರವಾಗಿ ಈ ನಟಿ ನೇರವಾಗಿ ಅನೇಕರ ಮೇಲೆ ಆರೋಪದ ನಂತರ ಬಹಳಷ್ಟು ಬೆಳವಣಿಗೆಗಳು ಬಾಲಿವುಡ್‌ನಲ್ಲಿ ನಡೆದಿವೆ. ಇದೀಗ ಇವರ ವಿವಾದದ ಹೇಳಿಕೆಯೊಂದು ಭಾರೀ ಚರ್ಚೆಗೆ ಕಾರಣವಾಗಿದೆ.

ಶಿವಸೇನೆ ಸಂಸದ ಸಂಜಯ್ ರೌತ್ ನನಗೆ ಮುಂಬೈಗೆ ಹಿಂತಿರುಗಬಾರದೆಂದು ಹೇಳುತ್ತಿದ್ದಾರೆ. ಬಹಿರಂಗವಾಗಿ ಬೆದರಿಕೆ ಹಾಕುತ್ತಿದ್ದಾರೆ. ಮುಂಬೈ ನಗರ ಪಾಕ್ ಆಕ್ರಮಿತ ಕಾಶ್ಮೀರದಂತೆ ಕಾಣುತ್ತಿದೆ ಎಂದು ಈ ನಟಿ ಟ್ವಿಟ್ ಮೂಲಕ ಹೇಳಿದ್ದಾರೆ. ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.

ಇನ್ನು ಪೊಲೀಸರ ಮೇಲೆಯೇ ಅನುಮಾನ ವ್ಯಕ್ತಪಡಿಸುತ್ತಿರುವ ಇವರು, ಮುಂಬೈ ನಗರದಲ್ಲಿಯೇ ವಾಸವಾಗಿದ್ದಾರೆ. ಆದರೆ ಇದೀಗ ಹೀಗೆ ಹೇಳುತ್ತಿರುವುದು ಎಷ್ಟು ಸರಿ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಕಂಗನಾ ರಣಾವತ್ ಸದ್ಯ ಸಿನಿಮಾಗಳಿಗಿಂತ ಇತರ ವಿಚಾರಗಳಿಗೆ ಹೆಚ್ಚು ಹೆಚ್ಚು ಸುದ್ದಿಯಾಗುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...