alex Certify ಸಲ್ಮಾನ್ ಸಿಬ್ಬಂದಿಗೆ ಸೋಂಕು: ಐಸೋಲೇಷನ್​​ಗೆ ಒಳಗಾದ ನಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಲ್ಮಾನ್ ಸಿಬ್ಬಂದಿಗೆ ಸೋಂಕು: ಐಸೋಲೇಷನ್​​ಗೆ ಒಳಗಾದ ನಟ

ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಐಸೋಲೇಷನ್​ಗೆ ಒಳಗಾಗಿದ್ದಾರೆ. ಸಲ್ಮಾನ್​ ಖಾನ್​​ ಡ್ರೈವರ್​ ಹಾಗೂ ಇಬ್ಬರು ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು ಮುಂಬೈ ಆಸ್ಪತ್ರೆಗೆ ದಾಖಲಾಗಿದ್ದಾರೆ . ಸಲ್ಮಾನ್​ ಖಾನ್​ ಸೇರಿದಂತೆ ಕುಟುಂಬಸ್ಥರು 14 ದಿನಗಳ ಕಾಲ ಐಸೋಲೇಷನ್​​ಗೆ ಒಳಗಾಗಲಿದ್ದಾರೆ ಅಂತಾ ಮೂಲಗಳು ತಿಳಿಸಿವೆ. ಸಲ್ಮಾನ್​ ಖಾನ್​ ಬಿಗ್​ ಬಾಸ್​ ಸೀಸನ್​ 14ರ ಶೂಟಿಂಗ್​ಗೆ ಕೆಲ ದಿನಗಳ ಹಿಂದಷ್ಟೇ ಹಾಜರಾಗಿದ್ದರು ಎನ್ನಲಾಗಿದ್ದು ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...