alex Certify ಧಮ್ಕಿಗೆ 1,000 ರೂಪಾಯಿ…..ಕೊಲೆಗೆ 55,000 ರೂಪಾಯಿ….! ಯುಪಿಯಲ್ಲಿ ರೌಡಿಗಳಿಂದ ದರಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧಮ್ಕಿಗೆ 1,000 ರೂಪಾಯಿ…..ಕೊಲೆಗೆ 55,000 ರೂಪಾಯಿ….! ಯುಪಿಯಲ್ಲಿ ರೌಡಿಗಳಿಂದ ದರಪಟ್ಟಿ

Rs 5000 for thrashing and Rs 55000 for murder: The post by Uttar Pradesh-based gang goes viralಉತ್ತರ ಪ್ರದೇಶದ ಮುಜಾಫರ್​ನಗರ ಮೂಲದ ರೌಡಿಗಳ ಗ್ಯಾಂಗ್​ ಒಂದು ಗೂಂಡಾಗಿರಿ ನಡೆಸಲು ದರ ನಿಗದಿ ಮಾಡಿ ಪಟ್ಟಿ ಬಿಡುಗಡೆ ಮಾಡಿದ್ದು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

ಪಿಸ್ತೂಲ್​ ಹಿಡಿದ ಯುವಕನೊಬ್ಬನ ಫೋಟೋ ಹಾಗೂ ರೌಡಿಸಂ ಸೇವೆಗಳ ದರದ ಚಾರ್ಟ್​ನ್ನ ಪೋಸ್ಟ್ ಮಾಡಲಾಗಿದೆ. ಇದರಲ್ಲಿ ಬೆದರಿಕೆ ಹಾಕಲು 1000 ರೂಪಾಯಿ, ಯಾರನ್ನಾದರೂ ಹೊಡೆಯಲು 5000 ರೂಪಾಯಿ, ಗಂಭೀರ ಗಾಯ ಮಾಡಲು 10000 ರೂ. ಹಾಗೂ ಕೊಲೆ ಮಾಡಲು 55000 ರೂಪಾಯಿ ಅಂತಾ ಬರೆಯಲಾಗಿದೆ.‌

ಈ ಪೋಸ್ಟ್​ಗಳು ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡ್ತಾ ಇದ್ದಂತೆ ಅಲರ್ಟ್ ಆದ ಪೊಲೀಸರು ಕಿಡಿಗೇಡಿ ಯುವಕನನ್ನ ಪತ್ತೆ ಹಚ್ಚಿದ್ದಾರೆ. ಈ ರೀತಿ ಫೋಟೋ ಪೋಸ್ಟ್ ಮಾಡಿದ ಯುವಕ ಚರತ್​ವಾಲ್​ ಠಾಣಾ ಪ್ರದೇಶದ ಚೌಕಡ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...