alex Certify ಹೋಂ ಕ್ವಾರಂಟೈನ್​ಗೆ ಒಳಗಾದ ಟೀಂ ಇಂಡಿಯಾ ಆಟಗಾರರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೋಂ ಕ್ವಾರಂಟೈನ್​ಗೆ ಒಳಗಾದ ಟೀಂ ಇಂಡಿಯಾ ಆಟಗಾರರು

ಆಸ್ಟ್ರೇಲಿಯಾ ಪ್ರವಾಸದಿಂದ ಭಾರತಕ್ಕೆ ವಾಪಸ್ಸಾಗಿರುವ ಟೀಂ ಇಂಡಿಯಾದ ಐವರು ಸದಸ್ಯರಿಗೆ 7 ದಿನಗಳ ಕಡ್ಡಾಯ ಕ್ವಾರಂಟೈನ್​ನಲ್ಲಿ ಇಡಲಾಗಿದೆ ಎಂದು ವರದಿಗಳು ತಿಳಿಸಿವೆ.

ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ ಕ್ರಿಕೆಟ್​ ತಂಡದ ಸದಸ್ಯರು ಕಡ್ಡಾಯ ಆರ್​ಟಿ – ಪಿಸಿಆರ್​ ಪರೀಕ್ಷೆಗೆ ಒಳಗಾಗಬೇಕು ಎಂದು ಬಿಎಂಸಿ ಕಮಿಷನರ್​ ಇಕ್ಬಾಲ್​ ಸಿಂಗ್​ ಚಾಹಲ್​ ಹೇಳಿದ್ದಾರೆ. ಮುಂದಿನ 7 ದಿನಗಳವರೆಗೂ ಆಟಗಾರರಿಗೆ ಹೋಂ ಕ್ವಾರಂಟೈನ್​​ನಲ್ಲಿ ಇರಬೇಕಾಗುತ್ತದೆ ಎಂದು ಹೇಳಿದ್ರು.

ಬಿಎಂಸಿ ಸೂಚನೆಯಂತೆ ಟೀಂ ಇಂಡಿಯಾ ಹಂಗಾಮಿ ನಾಯಕ ಅಜಿಂಕ್ಯ ರಹಾನೆ, ಆಟಗಾರರಾದ ರೋಹಿತ್ ಶರ್ಮಾ, ಶಾರ್ದೂಲ್​ ಠಾಕೂರ್​ ಹಾಗೂ ಪ್ರಥ್ವಿ ಶಾ ಹೋಂ ಕ್ವಾರಂಟೈನ್​ನಲ್ಲಿ ಇದ್ದಾರೆ. ಟೀಂ ಇಂಡಿಯಾ ಕೋಚ್​ ರವಿ ಶಾಸ್ತ್ರಿ ಕೂಡ ಬೆಳಗ್ಗೆ ಮುಂಬೈಗೆ ಬಂದಿಳಿದಿದ್ದು ಕ್ವಾರಂಟೈನ್​ಗೆ ಒಳಗಾಗಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...