alex Certify ತಂದೆ ವಿರುದ್ದ ದೂರು ನೀಡಲು 10 ಕಿ.ಮೀ. ನಡೆದು ಬಂದ ಪುಟ್ಟ ಪೋರಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಂದೆ ವಿರುದ್ದ ದೂರು ನೀಡಲು 10 ಕಿ.ಮೀ. ನಡೆದು ಬಂದ ಪುಟ್ಟ ಪೋರಿ..!

ಓಡಿಶಾದ 6 ನೇ ತರಗತಿ ಬಾಲಕಿ 10 ಕಿಲೋಮೀಟರ್​ ಕಾಲ್ನಡಿಗೆಯಲ್ಲೇ ಸಾಗಿ ತನ್ನ ತಂದೆ ವಿರುದ್ಧವೇ ದೂರು ದಾಖಲಿಸುವ ಮೂಲಕ ತನ್ನ ಹಕ್ಕಿಗಾಗಿ ಹೋರಾಡಿದ್ದಾಳೆ.

ಲಾಕ್​ಡೌನ್​ ಅವಧಿ ಶುರುವಾದಾಗಿನಿಂದ ಓಡಿಶಾ ಸರ್ಕಾರ ವಿದ್ಯಾರ್ಥಿಗಳ ಬ್ಯಾಂಕ್​ ಖಾತೆಗೆ ನಿತ್ಯ 8 ರೂಪಾಯಿಯಂತೆ ಹಣ ಠೇವಣಿ ಇಡುತ್ತಿದೆ. ವಿದ್ಯಾರ್ಥಿಗಳ ಬಳಿ ಬ್ಯಾಂಕ್​ ಖಾತೆ ಇರದಿದ್ದರೆ ಅವರ ಪೋಷಕರ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತಿತ್ತು. ವಿದ್ಯಾರ್ಥಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ನಿತ್ಯ 150 ಗ್ರಾಂ ಅಕ್ಕಿ ಪೂರೈಸಲಾಗಿತ್ತಿತ್ತು.

ಇದೀಗ ಈ ಯೋಜನೆ ಸಂಬಂಧ ಕೇಂದ್ರಪಾದದ ಬಾಲಕಿ ಕಲೆಕ್ಟರ್​ ಸಮರ್ಥ್​ ವರ್ಮಾರಿಗೆ ದೂರನ್ನ ನೀಡಿದ್ದಾಳೆ. ದೂರನ್ನ ಸ್ವೀಕರಿಸಿದ ಸಮರ್ಥ್ ಕುಮಾರ್​, ಇನ್ನು ಮುಂದಿದ ಹಣವನ್ನ ವಿದ್ಯಾರ್ಥಿನಿಯ ಬ್ಯಾಂಕ್​ ಖಾತೆಗೆ ಹಾಕಬೇಕು. ಹಾಗೂ ಈವರೆಗೆ ತಂದೆ ಆಕೆಗೆ ನೀಡದೇ ಅಕ್ರಮವಾಗಿ ಬಳಕೆ ಮಾಡಿದ ಹಣ ಹಾಗೂ ಅಕ್ಕಿಯನ್ನ ವಿದ್ಯಾರ್ಥಿನಿಗೆ ವಾಪಸ್​ ನೀಡಬೇಕು ಅಂತಾ ಸೂಚನೆ ನೀಡಿದ್ದಾರೆ.

ವಿದ್ಯಾರ್ಥಿನಿಯ ಜೊತೆ ಇರದ ಆಕೆಯ ತಂದೆ, ಆಕೆ ಬಳಿ ಬ್ಯಾಂಕ್​ ಖಾತೆ ಇದ್ದರೂ ಸಹ ತನ್ನ ಖಾತೆ ನಂಬರ್​ ನೀಡಿ ಅಕ್ರಮವಾಗಿ ಹಣ ಪಡೆದುಕೊಳ್ತಿದ್ದ ಹಾಗೂ ತನಗೆ ಬರಬೇಕಾದ ಅಕ್ಕಿಯನ್ನ ತಂದೆಯೇ ಬಳಕೆ ಮಾಡಿಕೊಳ್ಳುತ್ತಿದ್ದಾನೆ ಅಂತಾ ಬಾಲಕಿ ದೂರನ್ನ ಸಲ್ಲಿಸಿದ್ದಳು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...