
ಎರಡು ತಲೆಯಿರುವ ಕೊಳಕು ಮಂಡಲದ ಹಾವೊಂದನ್ನು ಮಹಾರಾಷ್ಟ್ರದಲ್ಲಿ ರಕ್ಷಿಸಲಾಗಿದೆ. ಈ ಹಾವು 11 ಸೆಂಮೀ ಉದ್ದವಿದ್ದು, ತಲಾ 2 ಸೆಂಮೀ ಇರುವ ಎರಡು ತಲೆಗಳನ್ನು ಹೊಂದಿದೆ.
ಕೊಳಕು ಮಂಡಲವು ಭಾರತದಲ್ಲಿ ಇರುವ ಅತ್ಯಂತ ವಿಷಪೂರಿತ ಹಾವುಗಳಲ್ಲಿ ಒಂದಾಗಿದೆ. ಇಲ್ಲಿನ ಕಲ್ಯಾಣ್ ನಿವಾಸಿಯೊಬ್ಬರು, ಈ ಹಾವನ್ನು ತಮ್ಮ ಮನೆಯ ಅಂಗಳದಲ್ಲಿ ನೋಡುತ್ತಲೇ ಹಾವು ಹಿಡಿಯುವವರನ್ನು ಅಲರ್ಟ್ ಮಾಡಿದ್ದಾರೆ. ಈ ಹಾವನ್ನು ಇಲ್ಲಿನ ಪರೇಲ್‌ನಲ್ಲಿರುವ ಹಫ್‌ಕೈನ್ ಸಂಸ್ಥೆಗೆ ನೀಡಲಾಗಿದೆ.
ಅಸಹಜವಾದ ವಂಶವಾಹಿಗಳ ಕಾರಣ ಎರಡು ತಲೆಯ ಹಾವುಗಳು ಬದುಕುಳಿಯುವ ಸಾಧ್ಯತೆಗಳು ಬಹಳ ಕಡಿಮೆ ಇವೆ ಎಂದು ಫೋಟೋ ಪೋಸ್ಟ್ ಮಾಡಿರುವ ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತಾ ನಂದಾ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.