alex Certify ಬಿಗ್‌ ನ್ಯೂಸ್: ರಾಜೀವ್ ಗಾಂಧಿ ಹಂತಕಿ ನಳಿನಿಯಿಂದ ಆತ್ಮಹತ್ಯೆ ಯತ್ನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್‌ ನ್ಯೂಸ್: ರಾಜೀವ್ ಗಾಂಧಿ ಹಂತಕಿ ನಳಿನಿಯಿಂದ ಆತ್ಮಹತ್ಯೆ ಯತ್ನ

ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆ ಪ್ರಕರಣದ ಆರೋಪಿ ನಳಿನಿ‌ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ. ನಳಿನಿ ವೆಲ್ಲೂರು ಜೈಲಿನಲ್ಲಿದ್ದಾಳೆ. ಅಲ್ಲಿಯೇ ಅವಳು  ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ನಳಿನಿ ಪರ ವಕೀಲರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ವಕೀಲರ ಪ್ರಕಾರ, ಕಳೆದ 29 ವರ್ಷಗಳಿಂದ ನಳಿನಿ ಜೈಲಿನಲ್ಲಿದ್ದಾಳೆ. ಇದೇ ಮೊದಲ ಬಾರಿ ನಳಿನಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆಂದು ವಕೀಲರು ಹೇಳಿದ್ದಾರೆ. ಜೈಲಿನಲ್ಲಿ ನಳಿನಿ ಮತ್ತು ಕೈದಿ ನಡುವೆ ಜಗಳವಾಗಿದೆ. ಜಗಳವಾಡಿದ ಕೈದಿ ಕೂಡ ಜೀವಾವಧಿ ಶಿಕ್ಷೆಗೊಳಗಾಗಿದ್ದಾಳಂತೆ. ಜಗಳದ ಬಗ್ಗೆ ಜೈಲರ್‌ಗೆ ದೂರು ನೀಡಿದ್ದು, ನಂತರ ನಳಿನಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ನಳಿನಿ ಈ ಮೊದಲು ಇಂತಹ ಪ್ರಯತ್ನ ಮಾಡಿಲ್ಲ, ಆದ್ದರಿಂದ ಇದರ ನಿಜವಾದ ಕಾರಣವನ್ನು ತಿಳಿದುಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ ಎಂದು ವಕೀಲರು ಹೇಳಿದ್ದಾರೆ. ನಳಿನಿಯನ್ನು ಬೇರೆ ಜೈಲಿಗೆ ಸ್ಥಳಾಂತರಿಸಬೇಕೆಂದು ವಕೀಲರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...