alex Certify ಜನ ಸಾಮಾನ್ಯರಿಗೆ ಮತ್ತೊಂದು ಶಾಕ್:‌ ರೈಲ್ವೇ ಫ್ಲಾಟ್‌ ಫಾರಂ ಟಿಕೆಟ್‌ ದರ 10 ರೂ.ನಿಂದ 30 ರೂ.ಗೆ ಏರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನ ಸಾಮಾನ್ಯರಿಗೆ ಮತ್ತೊಂದು ಶಾಕ್:‌ ರೈಲ್ವೇ ಫ್ಲಾಟ್‌ ಫಾರಂ ಟಿಕೆಟ್‌ ದರ 10 ರೂ.ನಿಂದ 30 ರೂ.ಗೆ ಏರಿಕೆ

ರೈಲು ನಿಲ್ದಾಣಗಳಲ್ಲಿ ಅನಗತ್ಯ ಜನಸಂದಣಿಯನ್ನ ತಪ್ಪಿಸುವ ಸಲುವಾಗಿ ಫ್ಲಾಟ್​ಫಾರಂ ಟಿಕೆಟ್​ ದರ 10 ರೂಪಾಯಿಯಿಂದ 30 ರೂಪಾಯಿಗೆ ಏರಿಕೆ ಮಾಡಲಾಗಿದೆ.

ಮುಂಬೈನ ಮೆಟ್ರೋ ವಲಯದಲ್ಲಿ ಫ್ಲಾಟ್​ಫಾರಂ ಟಿಕೆಟ್​ ದರವನ್ನ 50 ರೂಪಾಯಿಗೆ ಏರಿಕೆ ಮಾಡಲಾಗಿತ್ತು. ಬೇಸಿಗೆ ಕಾಲದಲ್ಲಿ ಅನಗತ್ಯ ಜನಸಂದಣಿಯನ್ನ ಕಡಿಮೆ ಮಾಡಬೇಕು ಎಂಬ ಉದ್ದೇಶದಿಂದ ಮಹಾರಾಷ್ಟ್ರ ಸರ್ಕಾರ ಹಾಗೂ ರೈಲ್ವೆ ಇಲಾಖೆ ಜಂಟಿಯಾಗಿ ಈ ನಿರ್ಧಾರಕ್ಕೆ ಬಂದಿತ್ತು.

ಇದೀಗ ದೇಶದ ಇತರೆ ರೈಲು ನಿಲ್ದಾಣಗಳ ಫ್ಲಾಟ್‌ ಫಾರಂ ಟಿಕೆಟ್‌ ದರವನ್ನೂ ಏರಿಕೆ ಮಾಡಲಾಗಿದೆ. ಈ ನೂತನ ಫ್ಲಾಟ್​ಫಾರಂ ಟಿಕೆಟ್​ ದರ ಜೂನ್​ 15ರವರೆಗೆ ಇರಲಿದೆ.

ಇನ್ನು ಈ ವಿಚಾರವಾಗಿ ಸ್ಪಷ್ಟನೆಯನ್ನೂ ನೀಡಿರುವ ಭಾರತೀಯ ರೈಲ್ವೆ ಇಲಾಖೆ ಸಚಿವಾಲಯ, ಜನಸಂದಣಿಯನ್ನ ನಿಯಂತ್ರಣ ಮಾಡುವ ಸಲುವಾಗಿ ಇದೊಂದು ತಾತ್ಕಾಲಿಕ ಕ್ರಮವಾಗಿದೆ. ರೈಲ್ವೆ ನಿಲ್ದಾಣಗಳಲ್ಲಿ ಸೋಂಕು ಹರಡದಂತೆ ತಡೆಯುವ ಸಲುವಾಗಿ ಈ ತಾತ್ಕಾಲಿಕ ಕ್ರಮ ಕೈಗೊಳ್ಳಲಾಗಿದೆ. ಎಂದು ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...