alex Certify ರಾಹುಲ್​ ವಿದೇಶ ಪ್ರವಾಸದ ಹಿಂದಿನ ಕಾರಣ ಬಿಚ್ಚಿಟ್ಟ ಕಾಂಗ್ರೆಸ್ ಮುಖಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಹುಲ್​ ವಿದೇಶ ಪ್ರವಾಸದ ಹಿಂದಿನ ಕಾರಣ ಬಿಚ್ಚಿಟ್ಟ ಕಾಂಗ್ರೆಸ್ ಮುಖಂಡ

Amid Buzz Over Rahul's Foreign Trip, Cong Clarifies 'Not a Vacation, Gone  to Meet Sick Family Member'ಕಾಂಗ್ರೆಸ್​ ನಾಯಕ ಹಾಗೂ ಸಂಸದ ರಾಹುಲ್​ ಗಾಂಧಿ ವಿದೇಶಿ ಪ್ರವಾಸದಲ್ಲಿ ಎಂಜಾಯ್​ ಮಾಡ್ತಿದ್ದಾರೆ ಎಂಬ ಬಿಜೆಪಿ ಟೀಕೆ ಸಂಬಂಧ ಕಾಂಗ್ರೆಸ್​ ಸ್ಪಷ್ಟೀಕರಣ ನೀಡಿದೆ. ರಾಹುಲ್​ ಗಾಂಧಿ ಅನಾರೋಗ್ಯಕ್ಕೀಡಾದ ಅವರ ಸಂಬಂಧಿ ಹಾಗೂ ಅಜ್ಜಿಯನ್ನ ಭೇಟಿಯಾಗಲು ವಿದೇಶಕ್ಕೆ ತೆರಳಿದ್ದಾರೆಯೇ ಹೊರತು ಪ್ರವಾಸಕ್ಕಾಗಿ ಅಲ್ಲ ಎಂದು ಕಾಂಗ್ರೆಸ್​ ಮುಖ್ಯ ವಕ್ತಾರ ಸುರ್ಜೇವಾಲಾ ಹೇಳಿದ್ದಾರೆ.

ಎಐಸಿಸಿ ಕೇಂದ್ರ ಕಚೇರಿಯಲ್ಲಿ ನಡೆದ ಪಕ್ಷದ 136ನೇ ಸಂಸ್ಥಾಪನಾ ದಿನದ ಮುನ್ನಾದಿನ ರಾಹುಲ್​ ಗಾಂಧಿ ಇಟಲಿಗೆ ಪ್ರಯಾಣ ಬೆಳೆಸಿದ್ದರು. ರಾಹುಲ್​ ಅನುಪಸ್ಥಿತಿಯನ್ನ ಬಿಜೆಪಿಯ ಅನೇಕ ನಾಯಕರು ಪ್ರಶ್ನೆ ಮಾಡಿದ್ದರು.

ಈ ವಿಚಾರವಾಗಿ ಸ್ಪಷ್ಟನೆ ನೀಡಿದ ಸುರ್ಜೇವಾಲಾ, ರಾಹುಲ್​ ಪ್ರಸ್ತುತ ಪಕ್ಷದ ಮುಖ್ಯಸ್ಥರಲ್ಲ. ಅಲ್ಲದೇ ಅವರು ಪಕ್ಷ ವಹಿಸಿದ ಎಲ್ಲಾ ಕರ್ತವ್ಯಗಳನ್ನ ನಿರ್ವಹಿಸುತ್ತಿದ್ದಾರೆ. ಅನಾರೋಗ್ಯ ಪೀಡಿತ ಸಂಬಂಧಿಯನ್ನ ಭೇಟಿಯಾಗಲು ವಿದೇಶಕ್ಕೆ ತೆರಳಿದವರ ವಿರುದ್ಧವೂ ಬಿಜೆಪಿ ಆಕ್ಷೇಪ ಎತ್ತೋದು ಸರಿಯಲ್ಲ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...