alex Certify ಮನತಣಿಸುತ್ತೆ ಬೆಕ್ಕು ಹಾಗೂ ಮೊಲದ ಮುದ್ದಾದ ವಿಡಿಯೋ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನತಣಿಸುತ್ತೆ ಬೆಕ್ಕು ಹಾಗೂ ಮೊಲದ ಮುದ್ದಾದ ವಿಡಿಯೋ..!

ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳ ಸಾಕಷ್ಟು ವಿಡಿಯೋ ಹಾಗೂ ಫೋಟೋಗಳು ವೈರಲ್​ ಆಗ್ತಿರುತ್ವೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುವ ಕಂಟೆಂಟ್​ಗಳಲ್ಲಿ ಜಾನುವಾರುಗಳ ವಿಡಿಯೋ ಮುಂಚೂಣಿಯಲ್ಲಿದೆ.

ಪ್ರಾಣಿಗಳಲ್ಲಿ ಇರುವಂತಹ ಮಾನವೀಯ ಗುಣ ಮನುಷ್ಯನಲ್ಲೂ ಇರೋಕೆ ಸಾಧ್ಯವಿಲ್ಲ ಅನ್ನೋದಕ್ಕೆ ಈ ವೈರಲ್​ ವಿಡಿಯೋ ಸಾಕ್ಷಿಯಾಗಿದೆ.

ವಿಡಿಯೋದಲ್ಲಿ ತಾನಿರುವ ಜಾಗದಿಂದ ಹೊರಬರಲಾಗದೇ ಬೆಕ್ಕೊಂದು ಕಷ್ಟ ಪಡ್ತಾ ಇದ್ದರೆ, ಮೊಲ ಆ ಬೆಕ್ಕು ಹೊರ ಬರಲು ನೆರವಾಗುವಂತೆ ಗುಂಡಿ ತೋಡಿದೆ. ಈ ಗುಂಡಿಯ ಮಾರ್ಗದಿಂದ ಬೆಕ್ಕು ಬಂಧನದಿಂದ ಪಾರಾಗಿದೆ. ಈ ವಿಡಿಯೋವನ್ನ ಟ್ವಿಟರ್​ನಲ್ಲಿ ಐಎಫ್​ಎಸ್​ ಅಧಿಕಾರಿ ಸುಶಾಂತ್​ ನಂದಾ ಶೇರ್​ ಮಾಡಿದ್ದಾರೆ.

ಇನ್ನೊಬ್ಬರ ಗಾರ್ಡನ್​ನಲ್ಲಿ ಹೂವನ್ನ ಬೆಳೆಯಿರಿ. ಇದರಿಂದ ನಿಮ್ಮ ಜೀವನ ಹೂಗುಚ್ಛವಾಗಲಿದೆ ಎಂದು ಶೀರ್ಷಿಕೆ ನೀಡಿದ್ದಾರೆ. ವಿಡಿಯೋ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀವ್ಸ್ ಪಡೆದುಕೊಂಡಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...