ಗಣರಾಜ್ಯೋತ್ಸವದ ದಿನದಂದು ಕೆಂಪುಕೋಟೆಯಲ್ಲಿ ನಡೆದ ಹಿಂಸಾಚಾರ ಸಂಬಂಧ ತನಿಖೆ ಆರಂಭಿಸಿರುವ ದೆಹಲಿ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ಪಂಜಾಬಿ ನಟ, ಸಾಮಾಜಿಕ ಕಾರ್ಯಕರ್ತ ದೀಪ್ ಸಿಧು ಹಾಗೂ ಇತರರ ವಿರುದ್ಧ ಸರಿಯಾದ ಮಾಹಿತಿ ನೀಡಿದವರಿಗೆ 1 ಲಕ್ಷ ರೂಪಾಯಿ ನಗದು ಬಹುಮಾನ ನೀಡೋದಾಗಿ ಘೋಷಿಸಿದ್ದಾರೆ.
ದೀಪ್ ಸಿಧು ಹಾಗೂ ಇತರೆ ಮೂವರು ಪ್ರಮುಖ ಆರೋಪಿಗಳ ಪತ್ತೆ ಸೂಕ್ತ ಸುಳಿವು ನೀಡಿದವರಿಗೆ 1 ಲಕ್ಷ ಬಹುಮಾನ ನೀಡೋದಾಗಿ ಹೇಳಿರುವ ದೆಹಲಿ ಪೊಲೀಸರು ಪ್ರಕರಣದ ಇತರೆ ಆರೋಪಿಗಳಾದ ಜಗ್ಬೀರ್ ಸಿಂಗ್, ಬೂಟಾ ಸಿಂಗ್, ಸುಖದೇವ್ ಸಿಂಗ್ ಹಾಗೂ ಇಕ್ಬಾಲ್ ಸಿಂಗ್ ವಿರುದ್ಧ ಮಾಹಿತಿ ನೀಡಿದ್ರೆ 50 ಸಾವಿರ ರೂಪಾಯಿ ನಗದು ಬಹುಮಾನ ನೀಡೋದಾಗಿ ಘೋಷಣೆ ಮಾಡಿದ್ದಾರೆ.
ಪ್ರಧಾನಿ ಮೋದಿ ಶ್ಲಾಘನೆ ಬಳಿಕ ಈ ವ್ಯಕ್ತಿಗೆ ಹರಿದುಬಂದಿದೆ ಕೊಡುಗೆಗಳ ಮಹಾಪೂರ
ಗಣರಾಜ್ಯೋತ್ಸವ ದಿನದಂದು ಟ್ರ್ಯಾಕ್ಟರ್ ರ್ಯಾಲಿಗೆ ದೆಹಲಿ ಪೊಲೀಸರ ಬಳಿ ಪ್ರತಿಭಟನಾ ನಿರತ ರೈತರು ಅನುಮತಿ ಕೇಳಿದ್ದರು. ಸಾಕಷ್ಟು ಮಾನದಂಡಗಳ ಬಳಿಕ ದೆಹಲಿ ಪೊಲೀಸರು ರ್ಯಾಲಿಗೆ ಅನುಮತಿ ನೀಡಿದ್ದರು. ಆದರೆ ನಿಗದಿತ ಸಮಯಕ್ಕೆ ಮೊದಲೇ ಬಂದ ಪ್ರತಿಭಟನಾಕಾರರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು ಮಾತ್ರವಲ್ಲದೇ, ಬ್ಯಾರಿಕೇಡ್ಗಳನ್ನ ಮುರಿದು ಕೆಂಪು ಕೋಟೆಗೆ ನುಗ್ಗಿ ಸಿಖ್ ಧ್ವಜವನ್ನ ಹಾರಿಸಿದ್ದರು.
ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಹಿಂಸಾಚಾರ ನಡೆಸಿದವರಿಂದ ಅಂತರ ಕಾಯ್ದುಕೊಂಡಿರುವ ರೈತ ಮುಖಂಡರು ನಮಗೂ ಹಿಂಸಾಚಾರ ನಡೆಸಿದವರಿಗೂ ಸಂಬಂಧವೇ ಇಲ್ಲ ಎಂದಿದ್ದಾರೆ.